ಅಣ್ಣಾಗೆ ಜೈ: ಎಲ್ಲೆಡೆ ನಿಲ್ಲದ ಹೋರಾಟ

7

ಅಣ್ಣಾಗೆ ಜೈ: ಎಲ್ಲೆಡೆ ನಿಲ್ಲದ ಹೋರಾಟ

Published:
Updated:
ಅಣ್ಣಾಗೆ ಜೈ: ಎಲ್ಲೆಡೆ ನಿಲ್ಲದ ಹೋರಾಟ

ಗುಲ್ಬರ್ಗ: ಅಣ್ಣಾ ಹಜಾರೆ ಸಂಘರ್ಷಕ್ಕೆ ಬೆಂಬಲ ಸೂಚಿಸಿ ದೇಶದ ಎಲ್ಲೆಡೆ ಸತ್ಯಾಗ್ರಹ, ಪ್ರತಿಭಟನೆ ನಡೆಯುತ್ತಿದ್ದು ಮಂಗಳವಾರವೂ ಗುಲ್ಬರ್ಗ ಜಿಲ್ಲೆಯ ವಿವಿಧೆಡೆ ವ್ಯಾಪಕ ಬೆಂಬಲ ವ್ಯಕ್ತವಾದ ವರದಿಗಳು ಬಂದಿವೆ.ಚಿಂಚೋಳಿ ವರದಿ

ದೇಶದಲ್ಲಿ ಅವ್ಯಾಹತವಾಗಿ ಹಬ್ಬಿರುವ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಪ್ರಬಲ ಜನಲೋಕಪಾಲ ಮಸೂದೆ ಜಾರಿಗೆ ತರಬೇಕೆಂದು ಒತ್ತಾಯಿಸಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ನವ ಯುಗದ ಗಾಂಧಿ, ಹಿರಿಯ ಸಾಮಾಜಿ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ತಾಲ್ಲೂಕಿನಲ್ಲಿ ಹಳ್ಳಿಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ಭಾನುವಾರ ಸ್ಥಳೀಯ ಸ್ವಾಮಿ ವಿವೇಕಾನಂದ ಯುವಕ ಸಂಘದ ನೇತೃತ್ವದಲ್ಲಿ ಅಣ್ಣಾ ಹಜಾರೆ ಪರ ಜಯಘೋಷಗಳನ್ನು ಕೂಗುತ್ತ ಭ್ರಷ್ಟಾಚಾರದ ಕಾರ್ಮೋಡ ಅಳಿಸಿ ಸ್ವಚ್ಛ ಆಡಳಿತ ದೊರೆಯಲಿ ಎಂದು ಆಶಿಸಿ ಗ್ರಾಮದ ಹನುಮಾನ ಮಂದಿರದಿಂದ ಮೇಣದ ಬತ್ತಿಗಳನ್ನು ಬೆಳಗುತ್ತ ಪ್ರಮುಖ ಬೀದಿಗಳ ಮೂಲಕ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.ಸಭೆಯಲ್ಲಿ ಮಾತನಾಡಿದ ಪತಂಜಲಿ ಯೋಗ ಸಮಿತಿ ತಾಲ್ಲೂಕು ಕಾರ್ಯದರ್ಶಿ ಚಂದ್ರಶೇಖರ ಪಲ್ಲೇದ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಗನ್ನಾಥ ಈದಲಾಯಿ, ಬಿಜೆಪಿ ಮುಖಂಡ ವಿಜಯಕುಮಾರ ಪರೀಟ್, ಮುಖಂಡರಾದ ವೀರಾರೆಡ್ಡಿ, ರಾಜಶೇಖರ ಪಲ್ಲೇದ್ ಹಾಗೂ ಸಂಘದ ಅಧ್ಯಕ್ಷ ಅನೀಲಕುಮಾರ ಕಂಟ್ಲಿ ಮುಂತಾದವರು ಮಾತನಾಡಿ ಲೋಕಪಾಲ ಮಸೂದೆ ಜಾರಿಗೊಳಿಸಲು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ ಜೊನ್ನಲ್, ರೇವಣಸಿದ್ದಪ್ಪ ಮುಖಂಡರಾದ ಬಸವರಾಜ ಕಂಟ್ಲಿ, ಹಣಮಂತ ಬೋಯಿನ್, ಚನ್ನು ಬೋಯಿನ್, ರಮೇಶ ಜೊನ್ನಲ್, ಭೀಮಶೆಟ್ಟಿ ಮುಕ್ಕಾ, ಅನೀಲಕುಮಾರ ಪರೀಟ್ ಮುಂತಾದವರು ಇದ್ದರು. ಅಫಜಲಪುರ ವರದಿ

ಅಫಜಲಪುರ: ತಾಲ್ಲೂಕಿನ ಬಡದಾಳ ಗ್ರಾಮದಲ್ಲಿ ಬಲಿಷ್ಠ ಜನಲೋಕಪಾಲ್ ಮೂಸದೆ ಜಾರಿಗೆ ಒತ್ತಾಯಿಸಿ ಗಾಂಧಿವಾದಿ ಅಣ್ಣ ಹಜಾರೆಯವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಿ ತೇರಿನ ಮಠದ ಚನ್ನಮಲ್ಲ ಶಿವಾಚಾರ್ಯರ ನೇತೃತ್ವದಲ್ಲಿ ಗ್ರಾಮದಲ್ಲಿ ಮಂಗಳವಾರ ಹೋರಾಟ ನಡೆಸಲಾಯಿತು.ನಂತರ ನಡೆದ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಹಿರಿಯ ನ್ಯಾಯವಾದಿ ಶಂಕರರಾವ ಹುಲ್ಲೂರ ಅವರು ಮಾತನಾಡಿ, ದೇಶದಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಭ್ರಷ್ಟಾಚಾರ ಕೇವಲ ಅಣ್ಣಾ ಹಜಾರೆ ಅವರು ಹೋರಾಟ ಮಾಡಿದರೆ ಸಾಲದು ಅವರೊಂದಿಗೆ ಕೈಜೋಡಿಸಲು ಮನೆಗೊಬ್ಬ ಅಣ್ಣಾ ಹಜಾರೆ ಹುಟ್ಟಿ ಬರಬೇಕೆಂದು ಅವರು ತಿಳಿಸಿದರು.ನಂತರ ತೇರಿನ ಮಠದ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ, ಭ್ರಷ್ಟಾಚಾರ ಮುಕ್ತ ಭಾರತವಾಗಲು ಪ್ರತಿಯೊಬ್ಬರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.

ಮುಖಂಡರಾದ ರೇವಣಸಿದ್ದ ಖೈರಾಟ, ಮಲ್ಲಿನಾಥ ಅತನೂರೆ ಮಾತನಾಡಿ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹಕ್ಕೆ ಎಲ್ಲರೂ ಬೆಂಬಲಿಸಬೇಕೆಂದು ಕೇಳಿಕೊಂಡರು. ಹೋರಾಟದಲ್ಲಿ ಗ್ರಾ.ಪಂ. ಅಧ್ಯಕ್ಷ ರಾಜು ಸಾಣಕ್ಕಿ, ಶರಣಗೌಡ ಮಾಲಿಪಾಟೀಲ, ಬೋಜು ಸಾಹುಕಾರ, ಶರಣಗೌಡ ಪಾಟೀಲ, ಸಿದ್ದಣ್ಣಗೌಡ ಪಾಟೀಲ ಭಾಗವಹಿಸಿದ್ದರು. ಹೋರಾಟದಲ್ಲಿ ಶಾಲಾ ಮಕ್ಕಳು, ರೈತರು ಪಾಲ್ಗೊಂಡಿದ್ದರು.ಶಹಾಬಾದ: ರೇವುನಾಯಕ ಧರಣಿ

ಶಹಾಬಾದ: ಭ್ರಷ್ಟಾಚಾರ ತಡೆಗೆ ಪ್ರಬಲ ಲೋಕಪಾಲ ಮಸೂದೆ ಜಾರಿಗಾಗಿ ಹೋರಾಟ ನಡೆಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಪಟ್ಟಣದಲ್ಲಿ ಸೋಮವಾರ ಬಿಜೆಪಿ ನಡೆಸಿದ ಸಾಂಕೇತಿಕ ಧರಣಿಯಲ್ಲಿ ಪಶುಸಂಗೋಪನಾ ಹಾಗೂ ಗ್ರಂಥಾಲಯ ಸಚಿವ ರೇವೂನಾಯಕ ಬೆಳಮಗಿ ಭಾಗವಹಿಸಿ ಬೆಂಬಲ ಸೂಚಿಸಿದರು.ಇಲ್ಲಿನ ಉಪತಹಸೀಲ್ದಾರ ಕಾರ್ಯಾಲಯ ಎದುರು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಜೊತೆ ಸೇರಿ ಕೆಲ ಹೊತ್ತು ಧರಣಿ ನಡೆಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಡಾ.ಅಶೋಕ ಜಿಂಗಾಡೆ ನೇತೃತ್ವದಲ್ಲಿ ಜಿಲ್ಲಾ ಮುಖಂಡ ಎಚ್.ಎ.ರೆಡ್ಡಿ, ಯುವ ಮೋರ್ಚಾ ಉಸ್ತುವಾರಿ ಶ್ರೀಶೈಲ ನಾಟೇಕಾರ, ಜಿಲ್ಲಾ(ಗ್ರಾಮೀಣ)ಉಪಾಧ್ಯಕ್ಷ ಅರುಣಕುಮಾರ ಪಟ್ಟಣಕರ್, ಪ್ರಧಾನ ಕಾರ್ಯದರ್ಶಿ ನವನಾಥ ಕುಸಾಳೆ ಉಪಸ್ಥಿತರಿದ್ದರು.ಚಂದ್ರಕಾಂತ ಗಬ್ಬೂರ, ಸೂರ್ಯಕಾಂತ ವಾರದ್, ಭೀಮರಾವ ಸಾಳುಂಕೆ, ಜಿಲ್ಲಾ ಪ.ಜಾ., ಪಂಗಡ ವಿಭಾಗದ ಕಾರ್ಯದರ್ಶಿ ಶಾಂತರೆಡ್ಡಿ ದಂಡಗೋಲಕರ್, ಯುವ ಘಟಕದ ಅಧ್ಯಕ್ಷ ನಾಗಣ್ಣ ರಾಂಪುರೆ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅನ್ವರ್ ಪಾಶಾ, ತಾಲ್ಲೂಕು ಪಂಚಾಯಿತಿ ಸದಸ್ಯ ನಿಂಗಣ್ಣ ಹುಳಗೋಳಕರ್, ವೆಂಕಟೇಶ ಕುಸಾಳೆ, ಸಂಜೀವ ಕುಮಾರ, ಬಸವರಾಜ ಬಿರಾದಾರ, ಶರಣು ವಸ್ತ್ರದ್, ದಶರಥ ಕೋಟನೂರ, ಬಸವರಾಜ ಮದ್ರಕಿ ಸೇರಿದಂತೆ ಬಿಜೆಪಿ ಹಾಗೂ ಕರವೇ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.ಬಿಜೆಪಿ ಧರಣಿ

ಚಿಂಚೋಳಿ: ಕೇಂದ್ರ ಸರ್ಕಾರ ಸ್ಥಾಯಿ ಸಮಿತಿಗೆ ಒಪ್ಪಿಸಿದ ಲೋಕಪಾಲ್ ಮಸೂದೆ ಹಲ್ಲಿಲ್ಲದ ಹಾವಿನಂತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರಮೇಶ ಯಾಕಾಪೂರ ಗೇಲಿ ಮಾಡಿದ್ದಾರೆ.ಸೋಮವಾರ ಮಿನಿ ವಿಧಾನ ಸೌಧದ ಎದುರು ತಾಲ್ಲೂಕು ಬಿಜೆಪಿ ಹಮ್ಮಿಕೊಂಡ ಧರಣಿಯಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರದ ಮೂಲೋತ್ಪಾಟನೆಗೆ ಪ್ರಬಲ ಜನ ಲೋಕಪಾಲ್ ಮಸೂದೆ ಸೂಕ್ತ ಎಂದರು.ಬಿಜೆಪಿ ತಾಲ್ಲೂಕು ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ, ಮಾಜಿ ಅಧ್ಯಕ್ಷ ಪ್ರಭಾಕರರಾವ್ ಕುಲ್ಕರ್ಣಿ,ಜಿಲ್ಲಾ ಕಾರ್ಯದರ್ಶಿ ಚಿತ್ರಶೇಖರ ಪಾಟೀಲ್, ಮುಖಂಡರಾದ ಚಂದ್ರಶೇಖರ ಪಲ್ಲೇದ್, ಮೋಹನರೆಡ್ಡಿ ಚಿಮ್ಮನಚೋಡ, ಜಗನ್ನಾಥ ಪಾಟೀಲ್ ಮುಂತಾದವರು ಮಾತನಾಡಿ ಅಣ್ಣಾ ಹಜಾರೆ 6ನೇ ದಿನವೂ ಉಪವಾಸ ಮುಂದುವರೆದಿದ್ದು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಘುನಾಥ ತುಮಕುಂಟಾ, ನಿರ್ದೇಶಕ ಅಜೀತ ಬಾಬುರಾವ್ ಪಾಟೀಲ್, ಭೀಮಶೆಟ್ಟಿ ಮುಕ್ಕಾ, ಭೀಮಶೆಟ್ಟಿ ಮುರುಡಾ, ಗುಂಡಪ್ಪ ಮಾಳಗೆ, ನಾಗೇಂದ್ರಪ್ಪ ಬುಬಲಿ, ಗೌತಮ ವೈಜನಾಥ ಪಾಟೀಲ್, ಬಸವರಾಜ ಕೆರೋಳ್ಳಿ, ಶಿವಶರಣಪ್ಪ ಪಾಟೀಲ್, ರವಿ ಹುಸೇಬಾಯಿ, ಮಂಗಳಮೂರ್ತಿ, ಮಹಮದ್ ಹಾದಿ, ಗುಂಡಯ್ಯ ಸ್ವಾಮಿ, ವೃತೇಂದ್ರರೆಡ್ಡಿ, ಸಂಗಪ್ಪ ಭೈರ್, ಶ್ರೀಧರ ಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಇದ್ದರು.ತಹಸೀಲ್ದಾರ ಬಿ.ಕೃಷ್ಣಪ್ಪನವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಧರಣಿಯಲ್ಲಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.ಚಿತ್ತಾಪುರ: ಆರತಿ ಬೆಳಗಿ ಪ್ರತಿಭಟನೆ

ಚಿತ್ತಾಪುರ: ದೇಶದಲ್ಲಿ ಕ್ಯಾನ್ಸರ್‌ನಂತೆ ಹರಡಿರುವ ಭ್ರಷ್ಟಾಚಾರ ತೊಲಗಿಸಲು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರಬಲ ಜನ ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಇಲ್ಲಿನ ಬಿಜೆಪಿ ನಗರ ಮಹಿಳಾ ಮೊರ್ಚಾ ಘಟಕದ ವತಿಯಿಂದ ರಾಜ್ಯ ಮಹಿಳಾ ಮೊರ್ಚಾ ಉಪಾಧ್ಯಕ್ಷೆ ಶಶಿಕಲಾ ಟೆಂಗಳಿ ನೇತೃತ್ವದಲ್ಲಿ ಅಕ್ಕಮಹಾದೇವಿ ಮಂದಿದಲ್ಲಿ ಆರತಿ ಬೆಳಗುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.ರಾಜ್ಯ ಮಹಿಳಾ ಮೊರ್ಚಾ ಉಪಾಧ್ಯಕ್ಷೆ ಶಶಿಕಲಾ ವಿಶ್ವನಾಥ ಟೆಂಗಳಿ ಮಾತನಾಡಿ, ಭ್ರಷ್ಟಾಚಾರ ವಿರುದ್ಧ ನಡೆಯುತ್ತಿರುವ, ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮವೆಂದೇ ಬಿಂಬಿತವಾಗುತ್ತಿರುವ ಅಣ್ಣಾ ಹಜಾರೆ ಅವರ ಹೋರಾಟ ಹತ್ತಿಕ್ಕುವ, ಹೋರಾಟಕ್ಕೆ ಅಡ್ಡಿಯುಂಟು ಮಾಡುವ, ಕುಟೀಲ, ಷಡ್ಯಂತ್ರ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ನೀತಿ ದೇಶದ ಪ್ರಜಾಪ್ರಭುತ್ವ ಆಡಳಿತಕ್ಕೆ ಮಾರಕವಾಗಿದೆ ಎಂದು ವಾಗ್ದಾಳಿ ಮಾಡಿದರು.ಮಹಿಳಾ ಮೊರ್ಚಾ ತಾಲ್ಲೂಕು ಅಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಉಪಾಧ್ಯಕ್ಷೆ ನಿವೇದಿತಾ, ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮೀ ಕೊಡದೂರ, ಜಯಶ್ರೀ ಶಂಭುಲಿಂಗ ಕರದಾಳ, ಸುಶೀಲಾ ಮಾಡಬೂಳ, ಜಯಶ್ರೀ ದಿಗ್ಗಾಂವ್, ಮಹಾನಂದಾ ಕೋರವಾರ, ರತ್ನಮ್ಮ, ಶೇಖಮ್ಮ, ಸುಭದ್ರಾ ಸೇರಿದಂತೆ ವಿವಿಧ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry