ಸೋಮವಾರ, ಮೇ 10, 2021
21 °C

ಬಿತ್ತನೆಗೆ ಬೀಜ ಗೊಬ್ಬರದ ಅಭಾವವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಹಿಂಗಾರು ಬಿತ್ತನೆಗೆ 45,485 ಹೆಕ್ಟೇರ್ ಪ್ರದೇಶದಲ್ಲಿ ಗುರಿ ನಿಗದಿ ಪಡಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎಂ ಮಲ್ಲಿಕಾರ್ಜುನ `ಪ್ರಜಾವಾಣಿ~ಗೆ ತಿಳಿಸಿದರು.

42985 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ನಿಗದಿಯಾಗಿದೆ.ಆದರೆ ಪ್ರಸಕ್ತ ಮುಂಗಾರಿನ ಆರಂಭದಲ್ಲಿ ಮಳೆಯ ಅಭಾವದ ಹಿನ್ನೆಲೆಯಲ್ಲಿ 2500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಯದ ಕಾರಣ ಅದನ್ನು ಹಿಂಗಾರು ಬೇಸಾಯಕ್ಕೆ ಪರಿಗಣಿಸಲಾಗಿದೆ ಎಂದರು.ಬಿತ್ತನೆಯ ಬೆಳೆಯ ವಿವರ ಆವರಣದಲ್ಲಿ ನೀರಾವರಿ ಬೆಳೆ: ಹಿಂಗಾರು ಜೋಳ -23430 (1200) ಹೆಕ್ಟೇರ್, ಕಡಲೆ -12850 (400)ಹೆ. ಗೋಧಿ -1850 (650) ಹೆ. ಕುಸುಬೆ -1825, ಸೂರ್ಯಕಾಂತಿ -500 (150), ಅಗಸೆ -100, ಹುರುಳಿ -30 ಹೆಕ್ಟೇರ್ ಬಿತ್ತನೆಗೆ ಇಲಾಖೆ ಗುರಿ ನಿಗದಿ ಪಡಿಸಿದೆ ಎಂದರು.ಬೀಜ ಗೊಬ್ಬರ ಕೊರತೆಯಿಲ್ಲ: ತಾಲ್ಲೂಕಿನಲ್ಲಿ ಹಿಂಗಾರು ಬಿತ್ತನೆಗೆ ಬೀಜ ಹಾಗೂ ರಸಗೊಬ್ಬರದ ಅಭಾವವಿಲ್ಲ. ಈಗಾಗಲೇ ಅಗತ್ಯ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ತಾಲ್ಲೂಕಿನಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು. ಆಗಸ್ಟ್‌ನಲ್ಲಿ ಹೆಚ್ಚು ಮಳೆ ಸುರಿದರು ಸೆಪ್ಟೆಂಬರ್‌ನಲ್ಲಿ ಮಳೆ ಹೆಚ್ಚಾಗಿಲ್ಲ. ಹೀಗಾಗಿ ಅತಿವೃಷ್ಟಿ ಎನ್ನಲಾಗದು. ಕೆಲವೆಡೆ ಫಲವತ್ತತೆ ಕಾಣದ ಕಡೆಗಳಲ್ಲಿ ಅತಿವೃಷ್ಟಿಯ ಭಾಸವಾಗಿದೆ.

 

ಅಗತ್ಯ ಬಿದ್ದರೆ ಸೂಕ್ತ ಸಮೀಕ್ಷೆಗೆ ಇಲಾಖೆ ಮೇಲಧಿಕಾರಿಗಳ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುವುದು ಎಂದರು. ತಾಂತ್ರಿಕ ಸಿಬ್ಬಂದಿ ಪ್ರದೀಪ ದೇಶಪಾಂಡೆ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.