ತ್ವರಿತ ಸೇವೆಗೆ ಪಿನ್‌ಕೋಡ್ ಸಹಕಾರಿ

ಸೋಮವಾರ, ಮೇ 20, 2019
32 °C

ತ್ವರಿತ ಸೇವೆಗೆ ಪಿನ್‌ಕೋಡ್ ಸಹಕಾರಿ

Published:
Updated:

ಗುಲ್ಬರ್ಗ: ಭಾರತೀಯ ಅಂಚೆ ಇಲಾಖೆಯ ಗುಲ್ಬರ್ಗ ವಿಭಾಗದ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ಅಂಚೆ ಸೂಚ್ಯಂಕ ಸಂಖ್ಯೆ (ಪಿನ್‌ಕೋಡ್) ಮಾಹಿತಿ ಹಾಗೂ ಗ್ರಾಹಕರ ಮೇಳ ನಡೆಯಿತು.



ಪಿನ್‌ಕೋಡ್ ಸ್ಪಷ್ಟವಾಗಿ ಬಳಸುವುದರಿಂದ ಅಂಚೆ ಪತ್ರಗಳ ತ್ವರಿತ ವಿಂಗಡಣೆ ಮತ್ತು ವಿಲೇವಾರಿ ಸುಲಭಸಾಧ್ಯ. ಸರಿಯಾದ ವಿಳಾಸಕ್ಕೆ ಪತ್ರ ತಲುಪಲು ಸಹಕಾರಿ. ಅಲ್ಲದೇ ರವಾನಿಸಿದ  ಸ್ಪೀಡ್‌ಪೋಸ್ಟ್ ಮತ್ತು ರಿಜಿಸ್ಟರ್ಡ್‌ ಪೋಸ್ಟ್‌ನ ಸದ್ಯದ ಸ್ಥಿತಿಯನ್ನು ಅಂತರ್ಜಾಲ ಮೂಲಕ ತಿಳಿದುಕೊಳ್ಳಬಹುದು ಎಂದು ಹಿರಿಯ ಅಂಚೆ ಅಧೀಕ್ಷಕ ಡಿ.ಕಲ್ಯಾಣರಾವ ಹೇಳಿದರು.



ಗ್ರಾಹಕರ ಪರವಾಗಿ ರುಸ್ತುಂಪುರ, ಸಲೀಂ ಬೇಗ, ಎಂ.ಡಿ.ಜೋಶಿ, ಜಗನ್ನಾಥ ಮತ್ತಿತರರು ಮಾತನಾಡಿದರು. ಪಿನ್‌ಕೋಡ್ ಡೈರೆಕ್ಟರಿಯನ್ನು ವಿತರಿಸಲಾಯಿತು. ಅಕ್ತರ್ ಆಲಿ ಮುದಗಲ್, ಅಧೀಕ್ಷಕ ಎಸ್.ಎಸ್.ಕಿಂಡಿಮಠ ಮತ್ತಿತರರು ಇದ್ದರು.



ಜಾಥಾ: ಪಿನ್‌ಕೋಡ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ನೆಹರುಗಂಜ್ ಅಂಚೆ ಕಚೇರಿಯಿಂದ ಸೂಪರ್ ಮಾರ್ಕೆಟ್, ಸರ್ದಾರ್ ವಲ್ಲಭಭಾಯಿ ಚೌಕ ಮಖಾಂತರ ಸ್ಟೇಷನ್ ಬಜಾರ ಅಂಚೆಕಚೇರಿ ಮಾರ್ಗವಾಗಿ ಶರಣಬಸವೇಶ್ವರ ದೇಗುಲದಿಂದ ಪ್ರಧಾನ ಅಂಚೆ ಕಚೇರಿ ತನಕ ಸಾಗಿತು. ಪ್ರಧಾನ ಅಂಚೆಕಚೇರಿ ಪಾಲಕ ಕೆ.ಮಹಾದೇವಪ್ಪ ಜಾಥಾವನ್ನು ಬರಮಾಡಿಕೊಂಡಿದ್ದರು. ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.



ಜಾಥಾದಲ್ಲಿ ಎಂ.ಸಿ. ಗುಡೂರ, ಎಂ.ಎನ್.ಎ. ಖಾನ್, ರಾಘವೇಂದ್ರ ರೆಡ್ಡಿ, ಬಸವರಾಜ ಮೇದಾ, ಎಸ್.ಡಿ.ಪಾಟೀಲ, ರೇವಣಸಿದ್ದಪ್ಪ, ರಾಮಮೋಹನ, ಶಂಕರಪ್ಪ ಮತ್ತಿತರರು ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry