ಚೀನಾ: ಪಾದಾಚಾರಿಗಳ ಮೇಲೆ ಹರಿದ ಹೈಜಾಕ್‌ ಆದ ಬಸ್‌; 5 ಮಂದಿ ಸಾವು

7

ಚೀನಾ: ಪಾದಾಚಾರಿಗಳ ಮೇಲೆ ಹರಿದ ಹೈಜಾಕ್‌ ಆದ ಬಸ್‌; 5 ಮಂದಿ ಸಾವು

Published:
Updated:

ಬೀಜಿಂಗ್‌: ಫ್ಯೂಜಿಯನ್‌ ಪ್ರಾಂತ್ಯದಲ್ಲಿ ಮಂಗಳವಾರ ಹೈಜಾಕ್‌ ಆಗಿರುವ ಬಸ್‌ವೊಂದು ಪಾದಾಚಾರಿಗಳ ಮೇಲೆ ಹರಿದಿದ್ದು, ಪೊಲೀಸ್‌ ಸಿಬ್ಬಂದಿ ಸೇರಿದಂತೆ ಕನಿಷ್ಠ 5 ಮಂದಿ ಸಾವಿಗೀಡಾಗಿದ್ದಾರೆ.

ಚಾಕು ಹಿಡಿದಿದ್ದ ವ್ಯಕ್ತಿಯೇ ಅವಘಡಕ್ಕೆ ಕಾರಣನೆಂದು ಶಂಕಿಸಲಾಗಿದೆ. ಆತನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಇಲ್ಲಿನ ಸರ್ಕಾರಿ ಮಾಧ್ಯಮ ಸಿಜಿಟಿಎನ್‌ ವರದಿ ಮಾಡಿದೆ. 

ಹೈಜಾಕ್‌ ಮಾಡಲಾದ ಬಸ್‌ ಪಾದಾಚಾರಿಗಳ ಮೇಲೆ ಹರಿದಿರುವುದರಿಂದ ಐದು ಮಂದಿ ಮೃತಪಟ್ಟು, 21 ಮಂದಿ ಗಾಯಗೊಂಡಿರುವುದಾಗಿ ಮತ್ತೊಂದು ಮಾಧ್ಯಮ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !