ವಾರ್ಸಾ: ವಿಶ್ವ ಚಾಂಪಿಯನ್ಷಿಪ್ ಚಾಲೆಂಜರ್ ಡಿ.ಗುಕೇಶ್ ಅವರು ಸೂಪರ್ಬಿಟ್ ರ್ಯಾಪಿಡ್ ಮತ್ತು ಬ್ಲಿಟ್ಜ್ ಟೂರ್ನಿಯಲ್ಲಿ ಸಪ್ಪೆ ಆರಂಭದ ನಂತರ ಶುಕ್ರವಾರ ಉತ್ತಮ ಪ್ರದರ್ಶನ ನೀಡಿದರು. ಅವರಿ ಸ್ವದೇಶದ ಪ್ರಜ್ಞಾನಂದ ಅವರನ್ನು ನಾಲ್ಕನೇ ಸುತ್ತಿನಲ್ಲಿ ಮತ್ತು ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಐದನೇ ಸುತ್ತಿನಲ್ಲಿ ಸೋಲಿಸಿದರು.

ಗುಕೇಶ್ ಆರನೇ ಸುತ್ತಿನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರ ಜೊತೆ ಪಾಯಿಂಟ್ ಹಂಚಿಕೊಂಡು ರ್ಯಾಪಿಡ್ ಮಾದರಿಯಲ್ಲೂ ತಮ್ಮನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ಸಾರಿದರು.

ಆದರೆ ಮೊದಲ ಹಿನ್ನಡೆ ನಂತರ ಚೇತರಿಸಿಕೊಂಡ ಪ್ರಜ್ಞಾನಂದ ಐದನೇ ಸುತ್ತಿನಲ್ಲಿ ಹಾಲೆಂಡ್ನ ಅನಿಶ್ ಗಿರಿ ಅವರನ್ನು ಮಣಿಸಿದ ಚೆನ್ನೈ ಚತುರ, ಆರನೇ ಸುತ್ತಿನಲ್ಲಿ ವಿನ್ಸೆಂಟ್ ಕೀಮರ್ (ಜರ್ಮನಿ) ಮೇಲೆ ಜಯಗಳಿಸಿ ಚೇತರಿಕೆ ಪ್ರದರ್ಶಿಸಿದರು.

ಆರನೇ ಸುತ್ತಿನ ನಂತರ ನಾರ್ವೆಯ ಕಾರ್ಲ್ಸನ್ ಮತ್ತು ಚೀನಾದ ವೀ ಯಿ ಅವರು ತಲಾ ಎಂಟು ಪಾಯಿಂಟ್ಗಳೊಡನೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಪ್ರಜ್ಞಾನಂದ ಮತ್ತು ರುಮೇನಿಯಾದ ಕಿರಿಲ್ ಶೆವಚೆಂಕೊ ತಲಾ ಏಳು ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ನಾಡಿರ್ಬೆಕ್ ಅಬ್ದುಸತ್ತಾರೋವ್ (ಉಜ್ಬೇಕಿಸ್ತಾನ), ಗುಕೇಶ್ ಮತ್ತು ಅರ್ಜುನ್ ಇರಿಗೇಶಿ ಆರು ಪಾಯಿಂಟ್ಸ್ ಶೇಖರಿಸಿದ್ದು, ಜಂಟಿ ಐದನೇ ಸ್ಥಾನದಲ್ಲಿದ್ದಾರೆ. ಆತಿಥೇಯ (ಪೋಲೆಂಡ್) ದೇಶದ ಗ್ರ್ಯಾಂಡ್ಮಾಸ್ಟರ್ ಯಾನ್ ಕ್ರಿಸ್ಟೋನ್ ಡೂಡ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೀಮರ್, ಹತ್ತು ಆಟಗಾರರ ಟೂರ್ನಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅನಿಶ್ (3 ಪಾಯಿಂಟ್) ಕೊನೆಯ ಸ್ಥಾನದಲ್ಲಿದ್ದಾರೆ.

ಇರಿಗೇಶಿ ತಮ್ಮ ಮೊದಲ ವಿಜಯವನ್ನು ಶೆವಚೆಂಕೊ ವಿರುದ್ಧ ದಾಖಲಿಸಿದರು.

ಗುಕೇಶ್ ಈ ಟೂರ್ನಿಯ ಮೊದಲ ಎರಡು ಪಂದ್ಯಗಳನ್ನು ಸೋತಿದ್ದರು. ಒಂದು ಪಂದ್ಯ ಡ್ರಾ ಆಗಿತ್ತು. ಆದರೆ ನಂತರದ ಮೂರು ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಪ್ರಜ್ಞಾನಂದ ಅವರನ್ನು 41 ನಡೆಗಳಲ್ಲಿ ಸೋಲಿಸಿದರು. ಗಿರಿ ವಿರುದ್ಧ ಗೆಲ್ಲಲು ತೆಗೆದುಕೊಂಡಿದ್ದು 21 ನಡೆಗಳನ್ನಷ್ಟೇ.

ದಿನದ ಕೊನೆಯ ಪಂದ್ಯದಲ್ಲಿ ಅರ್ಜುನ್ ಇರಿಗೇಶಿ, ಅಬ್ದುಸತ್ತಾರೋವ್ ಜೊತೆ ‘ಡ್ರಾ’ ಮಾಡಿಕೊಂಡರು.

ದಿನದ ಉತ್ತಮ ಪ್ರದರ್ಶನ ಬಂದಿದ್ದು ವೀ ಯಿ ಅವರಿಂದ ಅವರು ಮೂರೂ ಸುತ್ತುಗಳಲ್ಲಿ ಜಯಗಳಿಸಿ ಕಾರ್ಲ್ಸನ್ ಜೊತೆ ಜಂಟಿಯಾಗಿ ಅಗ್ರಸ್ಥಾನಕ್ಕೇರಿದರು.

ಆರನೇ ಸುತ್ತಿನ ನಂತರದ ಸ್ಥಾನ: 1–2: ಕಾರ್ಲ್ಸನ್, ವೀ ಯಿ (ತಲಾ 8 ಅಂಕ), 3–4: ಶೆವಚೆಂಕೊ, ಪ್ರಜ್ಞಾನಂದ (ತಲಾ 7 ಅಂಕ); 5–7: ಅಬ್ದುಸತ್ತಾರೋವ್, ಗುಕೇಶ್ , ಅರ್ಜುನ್ (ತಲಾ 6 ಪಾಯಿಂಟ್ಸ್), 8. ಡೂಡ (5 ಅಂಕ), 9. ವಿನ್ಸೆಂಟ್ ಕೀಮರ್ (4 ಅಂಕ), 10. ಅನಿಶ್ ಗಿರಿ (3 ಪಾಯಿಂಟ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.