ಬುಧವಾರ, 14–5–1969

ಸೋಮವಾರ, ಮೇ 27, 2019
24 °C
ಬುಧವಾರ

ಬುಧವಾರ, 14–5–1969

Published:
Updated:

ಶಿಕ್ಷಣ ಮಾಧ್ಯಮ ಬದಲಾವಣೆಗೆ ಕಾಲ ನಿಗದಿ: ರಾವ್ ನಕಾರ

ನವದೆಹಲಿ, ಮೇ 13– ‘ಪಠ್ಯ ಪುಸ್ತಕಗಳ ಸಿದ್ಧತೆ ಸಾಕಷ್ಟು ನಡೆದಿದೆಯೆಂದು ನನಗೆ ತೃಪ್ತಿಯಾಗುವವರೆಗೆ’ ಇಂಗ್ಲಿಷ್‌ನಿಂದ ಪ್ರಾದೇಶಿಕ ಭಾಷೆಗೆ ಶಿಕ್ಷಣ ಮಾಧ್ಯಮವನ್ನು ಬದಲಾಯಿಸಲು ತಾವು ಕಾಲ ನಿಗದಿ ಮಾಡುವುದಿಲ್ಲವೆಂದು ಶಿಕ್ಷಣ ಸಚಿವ ಶ್ರೀ ವಿ.ಕೆ.ಆರ್.ವಿ. ರಾವ್ ಅವರು ಇಂದು ಲೋಕಸಭೆಗೆ ತಿಳಿಸಿದರು.

ಕಾಲ ನಿಗದಿ ಮಾಡುವಂತೆ ಕೇಳಿ ಶ್ರೀ ಮಧುಲಿಮೆಯ ಮತ್ತಿತರ ಕೆಲವರು ಒಂದು ಗಂಟೆ ಚರ್ಚೆ ಎತ್ತಿದ್ದರು.

ಡಾ. ರಾವ್‌ ಅವರು, ಸರಕಾರವು ಶಿಕ್ಷಣ ಮಾಧ್ಯಮದ ಬದಲಾವಣೆಗೆ ಬಯಸಿದರೂ ‘ವಿದ್ಯಾರ್ಥಿಯ ಜ್ಞಾನ ಮತ್ತು ಶಿಕ್ಷಣದ ಮಟ್ಟ ನರಳುವಂತಹ ರೀತಿಯಲ್ಲಿ ನಾವು ಅದನ್ನು ಬದಲಾಯಿಸಬಾರದು’ ಎಂದರು.

ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ತಯಾರಿಸಲು ಸರಕಾರ ‘ನಿರ್ದಿಷ್ಟ’ ಹೆಜ್ಜೆ ತೆಗೆದುಕೊಳ್ಳುತ್ತಿರುವುದಾಗಿ ಸಚಿವರು ಭರವಸೆ ಕೊಟ್ಟರು.

ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್‌ ಹೆಸರು ಸೂಚಿಸದಿದ್ದರೆ ಗಿರಿ ರಾಜೀನಾಮೆ?

ನವದೆಹಲಿ, ಮೇ 13– ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಪ‍್ರಧಾನಿ ಇಂದಿರಾ ಗಾಂಧಿಯವರೊಡನೆ ಅರ್ಧ ಗಂಟೆ ಮಾತುಕತೆ ನಡೆಸಿದರು.

ಮುಂದಿನ ರಾಷ್ಟ್ರಪತಿ ಯಾರೆಂಬ ಬಗೆಗೆ ಅವರು ಚರ್ಚಿಸಿದರೆಂದು ಹೇಳಲಾಗಿದೆ. ಅಭ್ಯರ್ಥಿ ಬಗೆಗೆ ಒಟ್ಟು ಅಭಿಪ್ರಾಯ ಮೂಡದಿದ್ದರೆ ಪಕ್ಷದ ಪ್ರಬಲ ವ್ಯಕ್ತಿಯನ್ನು ನಿಲ್ಲಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರೆಂದು ಸುದ್ದಿ‌.

ಹಂಗಾಮಿ ರಾಷ್ಟ್ರಪತಿ ವಿ.ವಿ. ಗಿರಿಯವರನ್ನೂ ಕಾಂಗ್ರೆಸ್ ಅಧ್ಯಕ್ಷರು ಭೇಟಿ ಮಾಡಿದ್ದರು. ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷವು ತಮ್ಮ ಹೆಸರನ್ನು ಸೂಚಿಸದಿದ್ದರೆ ಉಪ‍ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಬೇರಾವ ಮಾರ್ಗವೂ ತಮಗಿಲ್ಲವೆಂದು ಗಿರಿ ಸ್ಪಷ್ಟಪಡಿಸಿದರೆಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !