ಪಶ್ಚಿಮ ಬಂಗಾಳ: ಅಧಿಕಾರಕ್ಕೆ ಸಂಯುಕ್ತರಂಗದ ಲಗ್ಗೆ

7
ವಾರ

ಪಶ್ಚಿಮ ಬಂಗಾಳ: ಅಧಿಕಾರಕ್ಕೆ ಸಂಯುಕ್ತರಂಗದ ಲಗ್ಗೆ

Published:
Updated:

ಪಶ್ಚಿಮ ಬಂಗಾಳ: ಅಧಿಕಾರಕ್ಕೆ ಸಂಯುಕ್ತರಂಗದ ಲಗ್ಗೆ

ಕಮ್ಯುನಿಸ್ಟ್ ಪ್ರಾಬಲ್ಯದ ಹನ್ನೆರಡು ಪಕ್ಷಗಳ ಸಂಯುಕ್ತರಂಗ ಪಶ್ಚಿಮ ಬಂಗಾಳದ 280 ಮಂದಿ ಸದಸ್ಯರ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೇರಲು ಅರ್ಹತೆ ಪಡೆದಿದೆ. ಪ್ರಕಟಿತ 241 ಸ್ಥಾನಗಳ ಪೈಕಿ ಸಂಯುಕ್ತರಂಗ 181 ಸ್ಥಾನ ಗಳಿಸಿ ಅದ್ಭುತ ವಿಜಯ ಗಳಿಸಿದೆ.

ಉತ್ತರ ಪ‍್ರದೇಶದಲ್ಲಿ ಸ್ಪಷ್ಟ ಬಹುಮತ ಪಡೆಯಲು ಕಾಂಗ್ರೆಸ್ಸಿಗೆ ಇನ್ನೂ ಐದು ಸ್ಥಾನಗಳು ಬೇಕಾಗಿವೆ. ಬಿಹಾರದಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಸಾಧ್ಯವೇ ಇಲ್ಲ.

ಮುಂಬೈನಲ್ಲಿ ಶಾಂತ ಪರಿಸ್ಥಿತಿ: ಸತ್ತವರ ಸಂಖ್ಯೆ 49ಕ್ಕೆ ಏರಿಕೆ

ಮುಂಬೈ, ಫೆ. 12– ಮುಂಬೈನಲ್ಲಿ ನಡೆದ ನಾಲ್ಕು ದಿನಗಳ ಗಲಭೆಯಲ್ಲಿ ಸತ್ತವರ ಸಂಖ್ಯೆ ನಿನ್ನೆ 45 ಇದ್ದುದು ಇಂದು ಮಧ್ಯಾಹ್ನದ ವೇಳೆಗೆ 49ಕ್ಕೆ ಏರಿತು. ಒಬ್ಬ ಹುಡುಗ, ಇಬ್ಬರು ಹುಡುಗಿಯರು ಮತ್ತು ಮಹಿಳೆ ನಾನಾ ಆಸ್ಪತ್ರೆಗಳಲ್ಲಿ ನಿನ್ನೆ ರಾತ್ರಿಯಿಂದ ಸತ್ತಿದ್ದಾರೆ. ಗಲಭೆಗಳಲ್ಲಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಾಗಿಸಲಾಗಿತ್ತು.

ಈ ಗಲಭೆ ಪರಿಸ್ಥಿತಿಯ ಅವಕಾಶವನ್ನೇ ಉಪಯೋಗಿಸಿಕೊಂಡು ಬೈಕುಲಾದ ಎರಡು ಗುಂಪುಗಳು ಹಳೆಯ ಜಗಳವೊಂದನ್ನು ಇತ್ಯರ್ಥ ಮಾಡಿಕೊಳ್ಳಲು ಕತ್ತಿಗಳನ್ನು ಹಿಡಿದು ಹೋರಾಡುತ್ತಿದ್ದಾಗ ಪೊಲೀಸರು ಗುಂಡು ಹಾರಿಸಿದರು. ಇದರಿಂದ ಕೀಶಂಸಿಂಗ್ ಎಂಬ ವ್ಯಕ್ತಿಯೊಬ್ಬ ಸತ್ತನೆಂದು ಪೊಲೀಸರು ತಿಳಿಸಿದ್ದಾರೆ.

ಕರ್ಪೂರಿ ಠಾಕೂರ್ ಅವರ ಜಯ

ಪಟನಾ, ಫೆ. 12– ಬಿಹಾರ ಸಂಯುಕ್ತ ಸೋಷಲಿಸ್ಟ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ದರ್ಭಾಂಗ ಜಿಲ್ಲೆಯ ತಾಜ್‌ಪುರ ಕ್ಷೇತ್ರದಲ್ಲಿ ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್ಸಿನ ರಾಜೇಂದ್ರ ಮಹತೊ ಅವರನ್ನು 13,000 ಮತಗಳಿಂದ ಸೋಲಿಸಿ ಬಿಹಾರ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ.

ಪಿ.ಸಿ. ಘೋಷ್ ಪರಾಜಯ

ಕಲ್ಕತ್ತ, ಫೆ. 12– ಎರಡು ಬಾರಿ ಬಂಗಾಳದ ಮುಖ್ಯಮಂತ್ರಿಗಳಾಗಿದ್ದ ಡಾ. ‍ಪ್ರಫುಲ್ಲ ಚಂದ್ರಘೋಷ್ ಅವರು ಝಾರ್‌ಗ್ರಾಮ್ ಕ್ಷೇತ್ರದಲ್ಲಿ ಸಂಯುಕ್ತ ರಂಗದ ಅಭ್ಯರ್ಥಿಯೊಬ್ಬರಿಂದ 2,900 ಮತಗಳ ಅಂತರದಲ್ಲಿ ಸೋತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !