ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024| DC vs RR: ರೇಸ್‌ನಲ್ಲಿ ಉಳಿಯಲು ಡೆಲ್ಲಿಗೆ ಗೆಲುವು ಅನಿವಾರ್ಯ

ಇಂದು ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಪಂದ್ಯ
Published 6 ಮೇ 2024, 23:30 IST
Last Updated 6 ಮೇ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಪ್ಲೇ ಆಫ್‌ ರೇಸ್‌ನಲ್ಲಿ ಉಳಿಯಬೇಕಾದರೆ ಮಂಗಳವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಅನಿವಾರ್ಯ. ತಂಡ ಇದಕ್ಕಾಗಿ ರಿಷಭ್ ಪಂತ್ ಅವರಿಂದ ಅಮೋಘ ಆಟ ಮತ್ತು ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ ಅವರಿಂದ ಬಿರುಸಿನ ಬ್ಯಾಟಿಂಗ್‌ ನಿರೀಕ್ಷೆಯಲ್ಲಿದೆ.

ಲೀಗ್‌ನಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರದರ್ಶನ ಅಸ್ಥಿರವಾಗಿದೆ. ಆಡಿರುವ 11 ಪಂದ್ಯಗಳಲ್ಲಿ ಐದು ಗೆದ್ದು, ಆರು ಸೋತಿದ್ದು 10 ಪಾಯಿಂಟ್ಸ್‌ ಮಾತ್ರ ಖಾತೆಯಲ್ಲಿವೆ. ಹೀಗಾಗಿ ಪ್ಲೇ ಆಫ್‌ಗೆ ರೇಸ್‌ನಲ್ಲಿರಲು ಉಳಿದಿರುವ ಮೂರೂ  ಪಂದ್ಯಗಳನ್ನು ಗೆಲ್ಲುವುದು ಪಂತ್ ಬಳಗಕ್ಕೆ ಅನಿವಾರ್ಯ. ನಂತರ ಉಳಿದ ಪಂದ್ಯಗಳ ಲೆಕ್ಕಾಚಾರದ ಮೇಲೆ ಅವಕಾಶ ಅವಲಂಬಿಸಿದೆ.

ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ರಾಜಸ್ಥಾನ ರಾಯಲ್ಸ್ ಕ್ರಮವಾಗಿ 11 ಮತ್ತು 10 ಪಂದ್ಯಗಳಿಂದ ತಲಾ 16 ಪಾಯಿಂಟ್ಸ್‌ ಗಳಿಸಿವೆ. ಚೆನ್ನೈ (11 ಪಂದ್ಯಗಳಿಂದ 12), ಸನ್‌ರೈಸರ್ಸ್‌ ಹೈದರಾಬಾದ್‌ (10 ಪಂದ್ಯಗಳಿಂದ 12) ಮತ್ತು ಲಖನೌ ಸೂಪರ್‌ ಜೈಂಟ್ಸ್‌ (11 ಪಂದ್ಯಗಳಿಂದ 12) ಕೂಡ 16 ಪಾಯಿಂಟ್ಸ್‌ ದಾಟುವ ಅವಕಾಶ ಹೊಂದಿವೆ.

ಬೌಲರ್‌ಗಳಾದ ಖಲೀಲ್‌ ಅಹ್ಮದ್, ಇಶಾಂತ್ ಶರ್ಮಾ, ಕುಲದೀಪ್‌ ಯಾದವ್‌ ಅವರಿಗೆ ಎದುರಾಳಿ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌, ರಿಯಾನ್ ಪರಾಗ್‌ ಅವರು ರನ್‌ ಹೊಳೆ ಹರಿಸದಂತೆ ಕಟ್ಟಿಹಾಕುವ ಸವಾಲು ಇದೆ. ಆದರೆ ಒಂದು ಬದಿಯಲ್ಲಿ ಬೌಂಡರಿ ಬರೇ 60 ಮೀ. ಇರುವುದರಿಂದ ಎದುರಾಳಿಗಳ ಅಬ್ಬರಕ್ಕೆ ಸಂಪೂರ್ಣ ನಿಯಂತ್ರಣ ಕಷ್ಟ. ವಿಶ್ವಾಸದಿಂದ ಇರುವ ರಾಯಲ್ಸ್‌ ತಂಡ ಇದುವರೆಗೆ ಸೋತಿದ್ದು ಎರಡೇ ಪಂದ್ಯಗಳನ್ನು.

ಮೂರು ಅರ್ಧ ಶತಕ ಸಹಿತ 380 ರನ್ ಗಳಿಸಿರುವ ಪಂತ್‌ ಅವರಿಗೆ, ಈಗ ತಂಡಕ್ಕೆ ಬಿಕ್ಕಟ್ಟಿನ ಸಮಯದಲ್ಲಿ ಆಡಿ ತೋರಿಸುವ ಅವಕಾಶ ಒದಗಿದೆ. ಆದರೆ ರಾಯಲ್ಸ್‌ ಬೌಲಿಂಗ್‌ ದುರ್ಬಲವೇನಿಲ್ಲ. ಯಜುವೇಂದ್ರ ಚಾಹಲ್, ಆರ್‌.ಅಶ್ವಿನ್‌, ಸಂದೀಪ್‌ ಶರ್ಮಾ, ಟ್ರೆಂಟ್‌ ಬೌಲ್ಟ್‌ ಅವರಿಂದ ವೈವಿಧ್ಯಮಯವಾಗಿದೆ.

ಡೆಲ್ಲಿ ವೇಗಿಗಳು ಉತ್ತಮ ಪ್ರದರ್ಶನ ನೀಡಬೇಕಾಗಿದೆ.  ಖಲೀಲ್ ಅವರ ಇಕಾನಮಿ ದರ 9.47 ಆದರೆ, ಮುಕೇಶ್‌ ಓವರಿಗೆ 11.05 ರನ್‌ ನೀಡಿದ್ದಾರೆ. ಆ್ಯನ್ರಿಚ್‌ ನಾಕಿಯಾ ಅವರ ಇಕಾನಮಿ ದರ 13.36. ಆದರೆ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಪರಿಣಾಮಕಾರಿ ಆಗಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30. ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್‌ ನೆಟ್‌ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT