ಮಂಗಳವಾರ, ಮೇ 18, 2021
30 °C

ಯೋಗದಿಂದ ರೋಗಮುಕ್ತ ಸಮಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ನಮ್ಮ ಸಂಸ್ಕೃತಿಯಲ್ಲಿ ಸದೃಢ ಆರೋಗ್ಯಕ್ಕೆ ಬಹುಮಹತ್ವವಿದೆ. ಇಂದು ಹಲವು ದುಶ್ಚಟಗಳಿಂದ ಯುವಕರಲ್ಲಿ ಆರೋಗ್ಯ ಪೂರ್ಣವಾದ ವ್ಯಕ್ತಿತ್ವದ ಕೊರತೆ ಕಾಣುತ್ತಿದೆ. ಪತಂಜಲಿ ಯೋಗ ಶಿಬಿರದಿಂದ ರೋಗ ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಹೊಂದಲಾಗಿದೆ ಎಂದು ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಶಿವಾನಂದ ಸಾಲಿಮಠ ತಿಳಿಸಿದರು.ಪಟ್ಟಣದ ಏಕಾಂತರಾಮಯ್ಯ ಮಂದಿರದಲ್ಲಿ ಶನಿವಾರ ಪತಂಜಲಿ ಯೋಗ ಸಮಿತಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಯೋಗ ಕುರಿತು ಮಾಹಿತಿಯನ್ನು ನೀಡುತ್ತ ಮಾತನಾಡುತ್ತಿದ್ದರು.ಪ್ರತಿ ಗ್ರಾಮಗಳಿಗೂ ಯೋಗದ ಅರಿವು ಮೂಡಿಸಬೇಕಾಗಿದೆ. ಯೋಗದಿಂದ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಆರ್ಥಿಕ ಸಬಲತೆಯನ್ನು ಸಾಧಿಸಬಹುದು ಎಂದು ಸಾಲಿಮಠ ಅಭಿಪ್ರಾಯಪಟ್ಟರು.ಯೋಗ ಶಿಬಿರದ ಪ್ರಾದೇಶಿಕ ವಕ್ತಾರ ಹರಿಶರಣಜೀ ಹರಿದ್ವಾರ ಮಾತನಾಡಿ ಸದೃಡ ಯುವಜನಾಂಗದ ನಿರ್ಮಾಣಕ್ಕೆ ಕಂಕಣಬದ್ಧರಾಗಿರುವ ಗುರುರಾಮದೇವ ಬಾಬಾ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ. ಭ್ರಷ್ಟಾಚಾರ ಮುಕ್ತ ಮತ್ತು ಸ್ವಾಸ್ಥಯುಕ್ತ ಸಮಾಜ ಸೃಷ್ಠಿ ಇದರ ಉದ್ದೇಶವಾಗಿದೆ.

 

ರೋಗಕ್ಕಿಂತ ಮೊದಲು ಯೋಗ ಮಾಡಿ ಹಾಗೂ ವಿದೇಶಿಯರು ಕೂಡ ಯೋಗಕ್ಕೆ ಮಾರುಹೋಗುತ್ತಿದ್ದಾರೆ. ಭವಿಷ್ಯದಲ್ಲಿ ಯೋಗ ಜಗತ್ತಿನ ಉತ್ತಮ ಆರೋಗ್ಯದ ಸಾಧನವಾಗಲಿದೆ ಎಂದರು.ಜಿಲ್ಲಾ ಪತಂಜಲಿ ಯೋಗ ಸಮಿತಿಯ ಕಾರ್ಯದರ್ಶಿ ಶರಣು ಹೀರಾ, ತಾಲ್ಲೂಕು ಸಮಿತಿ ಅಧ್ಯಕ್ಷ ಬಾಬುರಾವ ಮಡ್ಡೆ ಮಾತನಾಡಿದರು. ಪ್ರಮುಖರಾದ ಶ್ರೀಮಂತರಾವ ಪಾಟೀಲ್, ಸಂಘಟಕ ಪ್ರಭಾಕರ ಸಲಗರೆ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ್ ಭಕರೆ, ಚುಸಾಪ ಅಧ್ಯಕ್ಷ ಗುರುರಾಜ ಮಾಲಿಪಾಟೀಲ್, ರಾಜೇಂದ್ರ ಮೀಸ್ಕಿನ್, ಮಲ್ಲಿನಾಥ ತುಕಾಣೆ, ಅಪ್ಪಾಸಾಹೇಬ ತೀರ್ಥೆ, ಎಲ್‌ಎಸ್ ಬೀದಿ, ಮಹಾಂತೇಶ ಸೋಮಾ, ಸಂಜಯ ಮೋರೆ ಸೇರಿದಂತೆ ಮಹಿಳೆಯರು ಮತ್ತು ಹಿರಿಯರು ಪಾಲ್ಗೊಂಡಿದರು.ಗುರುಲಿಂಗಯ್ಯ ಅಳ್ಳೋಳ್ಳಿಮಠ ನಿರೂಪಿಸಿದರು. ಯೋಗ ಶಿಬಿರದ ಅಂಗವಾಗಿ ಅಕ್ಟೋಬರ್ 8ರಿಂದ 1 ವಾರಗಳ ಕಾಲ ಸ್ಥಳೀಯ ಆರ್ಯ ಸಮಾಜದಲ್ಲಿ ಉಚಿತ ಯೋಗ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ತಾಲ್ಲೂಕು ಅಧ್ಯಕ್ಷ ಬಾಬುರಾವ ಮಡ್ಡೆ 9449619036  ಸಂಪರ್ಕಿಸಬಹುದು ಎಂದು ಸಂಘಟಕರು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.