ಮಂಗಳವಾರ, 3–9–1968

7
ವಾರ

ಮಂಗಳವಾರ, 3–9–1968

Published:
Updated:

ಕಂದಾಯ ಮತ್ತು ಲೆವಿ ರದ್ದಿಗೆ ರಾಜ್ಯ ರೈತರ ಬೃಹತ್ ಪ್ರದರ್ಶನ

ಬೆಂಗಳೂರು, ಸೆ. 2– ಭೂಕಂದಾಯವನ್ನು ರದ್ದು ಮಾಡಬೇಕೆಂದೂ ಹಾಗೂ ಲೆವಿ ಪದ್ಧತಿಯನ್ನು ತೆಗೆದು ಹಾಕಬೇಕೆಂದೂ ಸರ್ಕಾರವನ್ನು ಒತ್ತಾಯಪಡಿಸಿ, ಇಂದು ನಗರದಲ್ಲಿ ಪ್ರಜಾಸೋಷಲಿಸ್ಟ್ ಪಕ್ಷದ ಆಶ್ರಯದಲ್ಲಿ ಸುಮಾರು 1500 ಮಂದಿ ರೈತರ ಮೆರವಣಿಗೆ ನಡೆಯಿತು.

ಜೆಕ್ ಬಗ್ಗೆ ರಷ್ಯಾ ಕಮ್ಮುನಿಸ್ಟ್ ಪಕ್ಷದ ಬಹುಮುಖ್ಯ ಸಭೆ

ಮಾಸ್ಕೊ, ಸೆ. 2– ಜೆಕೊಸ್ಲೊವಾಕಿಯಾದ ಬಗ್ಗೆ ಸೋವಿಯತ್ ಕಮ್ಯುನಿಸ್ಟ್ ಪಕ್ಷದ ಬಹುಮುಖ್ಯ ಸಭೆಯೊಂದು ನಡೆಯಲಿದೆಯೆಂದು ತಮಗೆ ತಿಳಿದು ಬಂದಿದೆಯೆಂದು ಕಮ್ಯುನಿಸ್ಟ್ ಮೂಲಗಳು ಇಂದು ಹೇಳಿದವು.

ಕೇಂದ್ರ ಸಮಿತಿ ಭವನದಲ್ಲಿ ಈಗಾಗಲೇ ಸಭೆ ನಡೆಯುತ್ತಿದೆಯೆಂದು ಇತರ ಮೂಲಗಳು ಸೂಚನೆಗಳಿತ್ತಿವೆ.

ಇರಾನ್ ಭೂಕಂಪ: 20 ಸಾವಿರ ಜನರ ಬಲಿ

ಟೆಹರಾನ್, ಸೆ. 2– ಪೂರ್ವ ಇರಾನನ್ನು ಕಳೆದ ಎರಡು ದಿನ ಪೀಡಿಸಿದ ಭೂಕಂಪದಲ್ಲಿ 20 ಸಾವಿರ ಜನ ಸತ್ತಿದ್ದಾರೆಂದು ಅನಧಿಕೃತವಾಗಿ ಅಂದಾಜು ಮಾಡಿರುವುದಾಗಿ ಪೊಲೀಸ್ ಮತ್ತು ಪರಿಹಾರ ಸಂಘಗಳು ಇಂದು ತಿಳಿಸಿವೆ.

ದಿವಂಗತ ಬಾಳಿಗರ ಪ್ರತಿಭೆ, ಮಾನವೀಯತೆ ಬಗ್ಗೆ ಶಾಸಕರ ಪ್ರಶಂಸೆ

ಬೆಂಗಳೂರು, ಸೆ. 2– ಸಂಸದೀಯ ಪ್ರಜಾಪ್ರಭುತ್ವದ ಸವ್ಯಸಾಚಿ ದಿವಂಗತ ಶ್ರೀ ಬಂಟವಾಳ ವೈಕುಂಠಬಾಳಿಗರ ಬಹುಮುಖ ಪ್ರತಿಭೆ, ಮಾನವೀಯ ಗುಣಗಳನ್ನು ಇಂದು ಉಭಯ ಸದನಗಳಲ್ಲಿಯೂ ಸದಸ್ಯರು ಮುಕ್ತಕಂಠದಿಂದ ಪ್ರಶಂಸಿಸಿದರು.

ವಿದರ್ಭ ರಾಜ್ಯ ರಚನೆಗೆ ಒತ್ತಾಯ

ನವದೆಹಲಿ, ಸೆ. 2– ಪ್ರತ್ಯೇಕ ವಿದರ್ಭ ರಾಜ್ಯ ರಚನೆಗೆ ಒತ್ತಾಯಪಡಿಸಿ ಸಂಸತ್‌ನ 45 ಜನ ಸದಸ್ಯರು ಇಂದು ಪ್ರಧಾನ ಮಂತ್ರಿ ಇಂದಿರಾಗಾಂಧಿಯ

ವರಿಗೆ ಮನವಿ ಸಲ್ಲಿಸಿದರು. ಜನರ ಆಶೋತ್ತರಗಳನ್ನು ಅರಿಯಲು ವಿದರ್ಭದಲ್ಲಿ ಜನಮತಗಣನೆ ನಡೆಸುವಂತೆ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !