ಹರಿಯಾಣದಲ್ಲಿ ಸರ್ಕಾರ ರಚಿಸಲು ಸಂಯುಕ್ತ ರಂಗಕ್ಕೆ ಅವಕಾಶ ಅಗತ್ಯ

7

ಹರಿಯಾಣದಲ್ಲಿ ಸರ್ಕಾರ ರಚಿಸಲು ಸಂಯುಕ್ತ ರಂಗಕ್ಕೆ ಅವಕಾಶ ಅಗತ್ಯ

Published:
Updated:

ಹರಿಯಾಣದಲ್ಲಿ ಸರ್ಕಾರ ರಚಿಸಲು ಸಂಯುಕ್ತ ರಂಗಕ್ಕೆ ಅವಕಾಶ ಅಗತ್ಯ

ನವದೆಹಲಿ, ಡಿ. 9– ಶ್ರೀ ಭಗವತ್ ದಯಾಳ್ ಶರ್ಮಾ ಅವರ ನಾಯಕತ್ವದಲ್ಲಿರುವ ಹರಿಯಾಣದ ನೂತನ ಸಂಯುಕ್ತ ರಂಗಕ್ಕೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಇಂದು ಒತ್ತಾಯಪಡಿಸಿದರು.

ಮುಖ್ಯಮಂತ್ರಿ ಬನ್ಸಿಲಾಲ್ ಅವರ ನಾಯಕತ್ವದಲ್ಲಿರುವ ಕಾಂಗ್ರೆಸ್ ಸಚಿವ ಸಂಪುಟ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಿದೆಯೆಂದು ತಿಳಿಸಿದ ವಿರೋಧ ಪಕ್ಷದ ನಾಯಕರುಗಳು ರಾಷ್ಟ್ರಪತಿ ಆಡಳಿತ ಘೋಷಿಸುವುದರ ವಿರುದ್ಧ  ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.

ಜನಸಂಘದ ಶಾಸಕ ಎಸ್.ಎಸ್. ಶೆಟ್ಟರ್ ಅವರ ನಿಧನ

ಹುಬ್ಬಳ್ಳಿ, ಡಿ. 9– ವಿಧಾನ ಸಭೆಯ ಜನಸಂಘದ ಗುಂಪಿನ ನಾಯಕ ಹಾಗೂ ಕರ್ನಾಟಕ ಪ್ರಾಂತ್ಯ ಭಾರತೀಯ ಜನಸಂಘದ ಉಪಾಧ್ಯಕ್ಷ ಶ್ರೀ ಸದಾಶಿವ ಶಂಕರಪ್ಪ ಶೆಟ್ಟರ್ ಅವರು ಇಲ್ಲಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಇಂದು ಅಪರಾಹ್ನ 4–15 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದರು.

ಕೇವಲ 36 ವರ್ಷ ವಯಸ್ಸಿನ ದಿವಂಗತ ಶೆಟ್ಟರ್ ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಓರ್ವ ಸಹೋದರ ಇದ್ದಾರೆ.

ಕೇರಳದ ನಕ್ಸಲೀಯರಿಗೆ ಚೀನ ಸಬ್ ಮೆರಿನ್‌ಗಳಿಂದ ಶಸ್ತ್ರಾಸ್ತ್ರ ಬರುವ ಆಪಾದನೆ

ನವದೆಹಲಿ, ಡಿ. 9– ಚೀನಿ ಸಬ್‌ಮೆರಿನ್‌ಗಳು ಕೇರಳದ ಅನಿರ್ಬಂಧಿತ ಕಡಲ ತೀರದಲ್ಲಿ ಉಗ್ರವಾದಿಗಳಿಗೆ ಶಸ್ತ್ರಾಸ್ತ್ರಗಳನ್ನು ತಲುಪಿಸುತ್ತಿವೆ ಎಂದು ಶ್ರೀ ಹೇಮ್‌ಬರುವಾ ಅವರು ಇಂದು ಲೋಕಸಭೆಯಲ್ಲಿ ಆಪಾದಿಸಿದರು.

ಈ ಪರಿಸ್ಥಿತಿಯಲ್ಲಿ ಭಾರತ ಸರ್ಕಾರ ಮೌನ ಪ‍್ರೇಕ್ಷಕನಂತೆ ಉಳಿಯುವುದೆ ಅಥವಾ ಕ್ರಮ ಕೈಗೊಳ್ಳಲು ಉದ್ದೇಶಿಸಿದೆಯೇ ಎಂದು ಅವರು ಕೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !