ಗಿರಿಜನರ ಮೇಲೆ ಗೋಲಿಬಾರ್: ಶ್ರೀಕಾಕುಳಂ ಜಿಲ್ಲೆಯಲ್ಲಿ ಮನೆಗಳಿಗೆ ಬೆಂಕಿ, ಲೂಟಿ

7
ವಾರ

ಗಿರಿಜನರ ಮೇಲೆ ಗೋಲಿಬಾರ್: ಶ್ರೀಕಾಕುಳಂ ಜಿಲ್ಲೆಯಲ್ಲಿ ಮನೆಗಳಿಗೆ ಬೆಂಕಿ, ಲೂಟಿ

Published:
Updated:

ಗಿರಿಜನರ ಮೇಲೆ ಗೋಲಿಬಾರ್: ಶ್ರೀಕಾಕುಳಂ ಜಿಲ್ಲೆಯಲ್ಲಿ ಮನೆಗಳಿಗೆ ಬೆಂಕಿ, ಲೂಟಿ

ಹೈದರಾಬಾದ್, ಜ. 6– ಉತ್ತರ ವಿಶಾಖಪಟ್ಟಣ ಜಿಲ್ಲೆಯಲ್ಲಿನ ದಕ್ಷಿಣಿ ಗ್ರಾಮದಲ್ಲಿ ಕಳೆದ ಶನಿವಾರ ರಾತ್ರಿ ತಮ್ಮ ಮೇಲೆ ದಾಳಿ ನಡೆಸಿದ ‘ಕಮ್ಯೂನಿಸ್ಟ್‌ ಗಿರಿಜನರ’ ಮೇಲೆ ಪೊಲೀಸರು ಏಳು ಬಾರಿ ಗುಂಡು ಹಾರಿಸಿದರೆಂದು ಇಂದು ಇಲ್ಲಿ ಅಧಿಕೃತ ವರದಿಗಳಿಂದ ತಿಳಿದು ಬಂದಿದೆ.

ಪೊಲೀಸರು ಇಳಿದುಕೊಂಡಿದ್ದ ಶಾಲಾ ಕಟ್ಟಡ ಸಹಿತ ಅನೇಕ ಮನೆಗಳಿಗೆ ಗಿರಿಜನರು ಬೆಂಕಿ ಇಟ್ಟರೆಂದು ವರದಿಯಾಗಿದೆ.

ದಾಳಿ ನಡೆಸಿದ ಮೇಲೆ ಗಿರಿಜನರೆಲ್ಲ ಕತ್ತಲಲ್ಲಿ ಬೆಟ್ಟಗಳಲ್ಲಿ ತಲೆಮರೆಸಿಕೊಂಡ ಕಾರಣ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ. 

ಕಳೆದ ಕೆಲವು ವಾರಗಳಿಂದ ಈ ಪ್ರದೇಶದ ಕೆಲವು ಗ್ರಾಮಗಳಲ್ಲಿ ಗಿರಿಜನರು ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುತ್ತಿರುವುದು ಇದು ಏಳನೇ ಬಾರಿ.

**

ಮೂಷಿಕ ಮುತ್ತಿಗೆ

ನ್ಯೂಯಾರ್ಕ್, ಜ. 6– ಅಮೆರಿಕದ ಅತ್ಯಂತ ಪ್ರತಿಷ್ಠೆಯ ರಸ್ತೆ ನ್ಯೂಯಾರ್ಕಿನ ಪಾರ್ಕ್ ಅವೆನ್ಯೂ. ಇಲ್ಲಿ ರಸ್ತೆಯ ಮಧ್ಯಕ್ಕೆ ನೂರಾರು ಇಲಿಗಳು ಮುತ್ತಿಗೆ ಹಾಕಿ ಸಂಜೆ ವಿಹಾರಿಗಳ ಗಮನವನ್ನು ಆಕರ್ಷಿಸಿದವು.

ಅದ್ಧೂರಿ ಅಪಾರ್ಟ್‌ಮೆಂಟ್ ಭವನಗಳು ದುಬಾರಿ ಅಂಗಡಿಗಳು ಸಾಲುಗಟ್ಟಿ ನಿಂತ ರಸ್ತೆಗೆ ಇಲಿಗಳು ಇಳಿದವು.

ಕೇವಲ ಮೂರು ವಾರಗಳ ಹಿಂದೆ ಇಲಿಗಳು ಇಲ್ಲಿ ಪ್ರತ್ಯಕ್ಷವಾದವು. ವಯಸ್ಸಾದ ಮಹಿಳೆಯರು ದಾರಿಯಲ್ಲಿ ಕೆಡವಿ ಹೋಗುವ ಧಾನ್ಯಗಳಿಗಾಗಿ ಈ ಇಲಿಗಳು ಮುತ್ತಿಗೆ ಹಾಕಿವೆಯೆಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !