ಕುಕ್ಕೆ: 5ರಿಂದ ಸಂಜೆಯೂ ಆಶ್ಲೇಷ ಬಲಿ ಸೇವೆ

7
ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ

ಕುಕ್ಕೆ: 5ರಿಂದ ಸಂಜೆಯೂ ಆಶ್ಲೇಷ ಬಲಿ ಸೇವೆ

Published:
Updated:

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಜುಲೈ5ರಿಂದ ಸಂಜೆ ವೇಳೆಯೂ ಆಶ್ಲೇಷ ಬಲಿ ಸೇವೆಯನ್ನು ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದರು.

ಶನಿವಾರಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಆಶ್ಲೇಷ ಬಲಿ ಸೇವೆಯ ಸಮಯ ನಿರ್ಧರಿಸಲಾಗಿದೆ ಎಂದರು. ‘ನೂಕುನುಗ್ಗಲು ಕಡಿಮೆಯಾಗಲಿದೆ. ಆಶ್ಲೇಷ ಬಲಿ ಸೇವೆ ನೆರವೇರಿಸಲು ಬರುತ್ತಿರುವ ಭಕ್ತರ ಸಂಖ್ಯೆ ಅಧಿಕವಾಗುತ್ತಿದೆ. ಪ್ರತೀ ದಿನ  ಸುಮಾರು 400 ರಿಂದ 500 ನಡೆಯುತ್ತದೆ.  ವಿಶೇಷ ದಿನಗಳಲ್ಲಿ ಆಶ್ಲೇಷ ಬಲಿ ಸೇವೆ1200 ರಿಂದ 1400 ತಲುಪುತ್ತಿದೆ ಎಂದರು.

ಅಷ್ಠಮಂಗಲ ಪ್ರಶ್ನೆ ಚಿಂತನೆಯಲ್ಲಿ ಸೂಚಿಸಿದಂತೆ ದೇವರಿಗೆ ದ್ರವ್ಯಕಲಶಾಭಿಷೇಕವನ್ನು  ಪ್ರಧಾನ ಅರ್ಚಕರು ಜುಲೈ 4ರಂದು ಬೆಳಗ್ಗೆ 7 ಗಂಟೆಗೆ ನೆರವೇರಿಸುವರು. ಆನಂತರ ಅನುಜ್ಞಾ ಪ್ರಾರ್ಥನೆ ಮಾಡಿ ಸಂಜೆ  ಆಶ್ಲೇಷ ಬಲಿ ಪೂಜೆಯನ್ನು ನಡೆಸಲಾಗುವುದು. ಬೆಳಿಗ್ಗೆ ನಡೆಯುವ ಜಾಗದಲ್ಲೇ ಸಂಜೆಯೂ ನಡೆಯುವುದು.  ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ನುಡಿದರು.

ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್.,  ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ, ಬಾಲಕೃಷ್ಣ ಬಳ್ಳೇರಿ,ಕೇನ್ಯ ರವೀಂದ್ರನಾಥ ಶೆಟ್ಟಿ, ಕೃಷ್ಣಮೂರ್ತಿ ಭಟ್, ಮಹೇಶ್ ಕುಮಾರ್ ಕರಿಕ್ಕಳ, ಮಾಧವ.ಡಿ, ರಾಜೀವಿ ಆರ್ ರೈ, ದಮಯಂತಿ ಕೂಜುಗೋಡು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !