ಮಾಜಿ ಶಾಸಕ ಜೆ.ಆರ್‌.ಲೋಬೊಗೆ ವಂಚನೆ

7
ಬ್ಯಾಂಕ್‌ ಖಾತೆಯಿಂದ ₹ 49,000 ವರ್ಗಾವಣೆ

ಮಾಜಿ ಶಾಸಕ ಜೆ.ಆರ್‌.ಲೋಬೊಗೆ ವಂಚನೆ

Published:
Updated:

ಮಂಗಳೂರು: ವಂಚಕನೊಬ್ಬನ ಮಾತು ನಂಬಿ ಎಟಿಎಂ ಕಾರ್ಡ್‌ನ ಪಿನ್‌ ಸಂಖ್ಯೆ ಮತ್ತು ‘ಒನ್‌ ಟೈಮ್‌ ಪಾಸ್‌ವರ್ಡ್’ (ಒಟಿಪಿ) ನೀಡಿದ ಮಾಜಿ ಶಾಸಕ ಜೆ.ಆರ್‌.ಲೋಬೊ ₹ 49,000 ಕಳೆದುಕೊಂಡಿದ್ದಾರೆ.

ಗುರುವಾರ ಲೋಬೊ ಅವರಿಗೆ ಕರೆಮಾಡಿ ವ್ಯಕ್ತಿಯೊಬ್ಬ ತಾನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ. ‘ನಿಮ್ಮ ಬ್ಯಾಂಕ್‌ ಖಾತೆಯನ್ನು ಅಪ್‌ಡೇಟ್ ಮಾಡಬೇಕಿದೆ’ ಎಂದು ನಂಬಿಸಿ ಎಟಿಎಂ ಕಾರ್ಡ್‌ನ ಪಿನ್‌ ಸಂಖ್ಯೆ ಹಾಗೂ ಒಟಿಪಿ ಪಡೆದುಕೊಂಡಿದ್ದಾನೆ. ಕೆಲವೇ ಹೊತ್ತಿನಲ್ಲಿ ಅವರ ಖಾತೆಯಿಂದ ₹ 49,000 ವರ್ಗಾವಣೆ ಮಾಡಲಾಗಿದೆ.

ಹಣ ವರ್ಗಾವಣೆ ಆಗಿರುವ ಕುರಿತು ತಮ್ಮ ಮೊಬೈಲ್‌ ಸಂಖ್ಯೆಗೆ ಬ್ಯಾಂಕ್‌ನಿಂದ ಸಂದೇಶ ಬಂದ ಬಳಿಕ ತಾವು ಮೋಸ ಹೋಗಿರುವುದು ಮಾಜಿ ಶಾಸಕರ ಅರಿವಿಗೆ ಬಂದಿದೆ. ಬಳಿಕ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !