ಯೋಜನೆಗಳ ಸದುಪಯೋಗಕ್ಕೆ ಸಲಹೆ

7
ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಾಗಾರದ ಸಮಾರೋಪ

ಯೋಜನೆಗಳ ಸದುಪಯೋಗಕ್ಕೆ ಸಲಹೆ

Published:
Updated:
ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳೊಂದಿಗೆ ಗಣ್ಯರು

ಚಿಕ್ಕಬಳ್ಳಾಪುರ: ‘ನಿರುದ್ಯೋಗಿ ಯುವಜನರು ಉದ್ಯಮಶೀಲತೆ ತರಬೇತಿ ಪಡೆದು ಸ್ವಉದ್ಯೋಗ ಸ್ಥಾಪಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿ ಬದುಕಬೇಕು’ ಎಂದು ರಾಜ್ಯ ಖಾದಿ ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಸಹಾಯಕ ನಿರ್ದೇಶಕಿ ಚಿತ್ರಾ ಮಾಧವನ್ ಹೇಳಿದರು.

ನಗರ ಹೊರವಲಯದ ಚದುಲಪುರ ಕ್ರಾಸ್ ಬಳಿ ಇರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಅಡಿಯಲ್ಲಿ ನಡೆಸಿದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೆನರಾ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಪಾರ್ಶ್ವನಾಥ್ ಮಾತನಾಡಿ, ‘ಉದ್ಯಮ ಶೀಲತೆ ತರಬೇತಿ ಪಡೆಯುವ ಯುವ ಜನರು ಜಿಲ್ಲಾ ಕೈಗಾರಿಕಾ ಸಂಘ (ಡಿಐಸಿ), ಖಾದಿ ಗ್ರಾಮೋದ್ಯೋಗ ಮಂಡಳಿ (ಕೆವಿಐಬಿ), ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಮತ್ತು ವಿವಿಧ ಬ್ಯಾಂಕ್‌ಗಳ ಮೂಲಕ ದೊರೆಯುವ ಸಾಲವನ್ನು ಪಡೆದು ಸ್ವಂತ ಉದ್ಯಮ ಕಟ್ಟಿ ಬೆಳೆಸುವ ಮೂಲಕ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಡಿ.ನಾರಾಯಣಸ್ವಾಮಿ ಮಾತನಾಡಿ, ‘ಜಿಲ್ಲೆಯ ನಿರುದ್ಯೋಗಿಗಳು ಸಂಸ್ಥೆಯಲ್ಲಿ ನಡೆಯುವ ವಿವಿಧ ಉಚಿತ ತರಬೇತಿಗಳ ಪ್ರಯೋಜನ ಪಡೆದು, ಸ್ವ-ಉದ್ಯೋಗಿಗಳು ಆಗಬೇಕು’ ಎಂದು ತಿಳಿಸಿದರು. ಗಣ್ಯರು ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !