'ವೆಜಿಟಬಲ್' ದಿನಾಚರಣೆ

7

'ವೆಜಿಟಬಲ್' ದಿನಾಚರಣೆ

Published:
Updated:
Deccan Herald

ತುಮಕೂರು: ನಗರದ ಆರ್ಯಭಾರತಿ ಪ್ರಾಥಮಿಕ ಪಾಠಶಾಲೆಯಲ್ಲಿ ನರ್ಸರಿ ವಿಭಾಗ 'ವೆಜಿಟಬಲ್' ದಿನ ಆಚರಿಸಲಾಯಿತು.

ಪೋಷಕಾಂಶದ ತರಕಾರಿಗಳ ಬಗ್ಗೆ ಹಾಗೂ ಅವುಗಳನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಲಾಯಿತು.

ಆರ್ಯನ್ ಪ್ರೌಢಶಾಲೆಯ ಶಿಕ್ಷಕಿ ಹೇಮಮಾಲಿನಿ ಮಾತನಾಡಿ, ಕ್ಯಾರೆಟ್, ಹುರುಳಿಕಾಯಿ, ಬೀಟ್ ರೂಟ್, ಮೂಲಂಗಿ ಅಂತಹ ತರಕಾರಿಗಳು ಹಾಗೂ ಸೊಪ್ಪುಗಳನ್ನು  ಸೇವಿಸಿದರೆ ಯಾವುದೇ ರೋಗ ಬರುವುದಿಲ್ಲ ಎಂದರು.

ಶಾಲೆ ಮುಖ್ಯೋಪಾಧ್ಯಾಯ ಪಿ.ರಾಘವೇಂದ್ರ ಮಾತನಾಡಿ, ಮಕ್ಕಳು ದೃಢವಾಗಿರಲು ತರಕಾರಿಗಳ ಸೇವನೆ ಅವಶ್ಯಕ ಎಂದರು.

ಈ ವೇಳೆ ನರ್ಸರಿ ಮಕ್ಕಳು 'ವೆಜಿಟಬಲ್' ಹಾಗೂ ವಿವಿಧ ಬಗೆಯ ತರಕಾರಿ ಚಿತ್ರಗಳನ್ನು ಪ್ರದರ್ಶಿಸಿದರು.

ಶಿಕ್ಷಕಿಯರಾದ ಕೆ.ಪ್ರಮೀಳಾ, ಕಾಂಚನಾ, ರಾಜಲಕ್ಷ್ಮೀ ಮತ್ತು ನಾಗಮಣಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !