ಕ್ರೇನ್‌ ಬಿದ್ದು ಆರು ಕಾರ್ಮಿಕರ ಸಾವು

7
ಬಿರುಗಾಳಿಗೆ ಕುಸಿದ ಬೃಹತ್‌ ಕ್ರೇನ್‌, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಕ್ರೇನ್‌ ಬಿದ್ದು ಆರು ಕಾರ್ಮಿಕರ ಸಾವು

Published:
Updated:
Deccan Herald

ಸೇಡಂ: ತಾಲ್ಲೂಕಿನ ಕೋಡ್ಲಾ– ಬೆನಕನಹಳ್ಳಿ ಮಧ್ಯೆ ಇರುವ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಕ್ರೇನ್‌ ಬಿದ್ದು ಆರು ಕಾರ್ಮಿಕರು ಮೃತಪಟ್ಟಿದ್ದಾರೆ. ಕೆಲವರು ಗಂಭೀರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಬಿಹಾರ್ ಮೂಲದವರಾದ ತಬಾರಕ್ ಅಲಿ (25) ಸ್ಥಳದಲ್ಲೇ ಮೃತಪಟ್ಟಿದ್ದು, ಕಲಬುರ್ಗಿಯ ಯುನೈಟೆಡ್‌ ಆಸ್ಪತ್ರೆಯಲ್ಲಿ ಪಿ.ಟಿ. ಕಂಚನ್‌, ಸುಧಾಕರ್‌, ಜುಬೇರ್‌ ಮೃತಪಟ್ಟರೆ, ಚಿರಾಯು ಆಸ್ಪತ್ರೆಯಲ್ಲಿ ಬಿತಿನ್‌ ಹಾಗೂ ಅಜಯ್‌ ಕೊನೆಯುಸಿರೆಳೆದರು. ಶಹಜಾದ್‌ ಎಂಬ ಇನ್ನೊಬ್ಬ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು, ಯುನೈಟೆಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡಿದ್ದು, ಅವರಿಗೆ ಸೇಡಂ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.

ಕಾರ್ಮಿಕರು ಎಂದಿನಂತೆ ವೆಲ್ಡಿಂಗ್‌ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಬಿರುಗಾಳಿಯಿಂದ ಕ್ರೇನ್‌ ಕುಸಿದು ಅವಘಡ ಸಂಭವಿಸಿದೆ ಎಂದು ತಿಳಿಸಲಾಗಿದೆ.

ಕ್ರೇನ್‌ ಬಿದ್ದಾಗ ಹಲವರು ಅದರಡಿ ಸಿಲುಕಿಕೊಂಡರು. ತಬಾರಕ್‌ ಕೆಲವೇ ಕ್ಷಣಗಳಲ್ಲಿ ಮೃತಪಟ್ಟರು. ತೀವ್ರ ಗಾಯಗೊಂಡ ಆರು ಮಂದಿಯನ್ನು ನಗರಕ್ಕೆ ಸಾಗಿಸಲಾಯಿತು. ರಾತ್ರಿ 12ರ ಹೊತ್ತಿಗೆ ಐವರು ಕೊನೆಯುಸಿರೆಳೆದರು.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !