ವಿದ್ಯುತ್‌ ಪ್ರವಹಿಸಿ ಯುವಕ ಸಾವು

6
ಮಂಗಳೂರಿನ ಉಳ್ಳಾಲ ದರ್ಗಾ ಆವರಣದಲ್ಲಿ ಘಟನೆ

ವಿದ್ಯುತ್‌ ಪ್ರವಹಿಸಿ ಯುವಕ ಸಾವು

Published:
Updated:

ಮಂಗಳೂರು: ಇಲ್ಲಿನ ಉಳ್ಳಾಲ ದರ್ಗಾ ಆವರಣದಲ್ಲಿ ಸೋಮವಾರ ಸಂಜೆ ಕೆಲಸ ಮಾಡುತ್ತಿದ್ದಾಗ ವಿದ್ಯುತ್‌ ಪ್ರವಹಿಸಿ ಯುವಕನೊಬ್ಬ ಮೃತಪಟ್ಟಿದ್ದಾನೆ.

ಇನೋಳಿ ಮಲಾರ್ ನಿವಾಸಿ ಯೂಸೂಫ್  ಮೃತ ಯುವಕ. ದರ್ಗಾ ಆವರಣದಲ್ಲಿರುವ ಕಟ್ಟಡವೊಂದಕ್ಕೆ ಅಳವಡಿಸಿದ್ದ ತಗಡಿನ ಶೀಟ್‌ಗಳನ್ನು ತೆಗೆಯುತ್ತಿದ್ದರು. ಆಗ ಶೀಟ್‌ ಒಂದು ವಿದ್ಯುತ್‌ ತಂತಿಗೆ ತಗುಲಿದೆ. ವಿದ್ಯುತ್‌ ಪ್ರವಹಿಸಿದಾಗ ಆಘಾತದಿಂದ ಯೂಸೂಫ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದಾರೆ. ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !