ವಾಹನಗಳ ಡಿಕ್ಕಿ: ವ್ಯಕ್ತಿ ಸಾವು

7

ವಾಹನಗಳ ಡಿಕ್ಕಿ: ವ್ಯಕ್ತಿ ಸಾವು

Published:
Updated:

ಚಿಂತಾಮಣಿ: ತಾಲ್ಲೂಕಿನ ತಳಗವಾರದ ಬಳಿ ಶುಕ್ರವಾರ ಎರಡು ದ್ವಿಚಕ್ರವಾಹನಗಳು ಡಿಕ್ಕಿ ಹೊಡೆದಿದ್ದರಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

ಬೆಂಗಳೂರಿನ ಯಲಹಂಕದ ಅಗ್ರಹಾರ ಬಡಾವಣೆ ನಿವಾಸಿ ಶ್ರೀಧರ್ (23) ಮೃತ ವ್ಯಕ್ತಿ. ಮಂಜುನಾಥ್, ಜಗನ್ನಾಥ, ಅನಿಲ್‌ಕುಮಾರ್‌ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಅಗ್ರಹಾರ ಬಡಾವಣೆಯ ನಿವಾಸಿಗಳಾದ ಮಂಜುನಾಥ್, ಜಗನ್ನಾಥ್, ಶ್ರೀಧರ್ ದ್ವಿಚಕ್ರವಾಹನದಲ್ಲಿ ಬೆಂಗಳೂರಿನಿಂದ ಕೈವಾರಕ್ಕೆ ಹೊರಟಿದ್ದರು. ತಾಲ್ಲೂಕಿನ ಕಟಮಾಚನಹಳ್ಳಿ ನಿವಾಸಿ ಅನಿಲ್‌ಕುಮಾರ್‌ ತಮ್ಮ ದ್ವಿಚಕ್ರವಾಹನದಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !