‘ಜನರ ಸಂಕಷ್ಟಕ್ಕೂ ಸಿಎಂ ಸ್ಪಂದಿಸಲಿ’

7
ದೇವಸ್ಥಾನಗಳಿಗೆ ಕುಮಾರಸ್ವಾಮಿ ಭೇಟಿ: ಜಯಮೃತ್ಯುಂಜಯ ಶ್ರೀ ಸಲಹೆ

‘ಜನರ ಸಂಕಷ್ಟಕ್ಕೂ ಸಿಎಂ ಸ್ಪಂದಿಸಲಿ’

Published:
Updated:

ಬಾಗಲಕೋಟೆ: ’ದೇವಸ್ಥಾನಗಳಿಗೆ ಭೇಟಿಯ ಜೊತೆ ಜೊತೆಗೆ ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯಕ್ಕೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಲಿ‘ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ನಿರಂತರವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವುದು ಅವರ ವೈಯಕ್ತಿಕ ನಂಬಿಕೆ. ಆದರೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ಅವರ ಕರ್ತವ್ಯ.  ಕೃಷ್ಣೆ ಹಾಗೂ ಕಾವೇರಿ ಎರಡೂ ಕರ್ನಾಟಕದ ಎರಡು ಕಣ್ಣುಗಳು. ಒಂದಕ್ಕೆ ತೊಂದರೆಯಾದರೂ ಅದರ ಪರಿಣಾಮ ಇಡೀ ರಾಜ್ಯದ ಮೇಲೆ ಆಗುತ್ತದೆ. ಹಾಗಾಗಿ ಅಭಿವೃದ್ಧಿ ವಿಚಾರದಲ್ಲಿ ಉತ್ತರ–ದಕ್ಷಿಣ ಎನ್ನದೇ ಎಲ್ಲಾ ಭಾಗಕ್ಕೂ ನ್ಯಾಯ ದೊರಕಬೇಕು‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹಾಲುಣಿಸುವ ಪಂಚಮಿ: ನಾಗರ ಪಂಚಮಿ ಅಂಗವಾಗಿ ಇಲ್ಲಿನ ಕುಷ್ಠರೋಗಿಗಳ ಕಾಲನಿಯ ನಿವಾಸಿಗಳಿಗೆ ಹಾಲು, ಉಪಾಹಾರ ನೀಡುವ ಮೂಲಕ ಜಯಮೃತ್ಯುಂಜಯ ಶ್ರೀಗಳು ಹಾಲುಣಿಸುವ ಪಂಚಮಿ ಆಚರಿಸಿದರು.

ದೇಶದಲ್ಲಿ ಶೇ20ರಷ್ಟು ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ ಇದೆ. ಹುತ್ತಕ್ಕೆ ಎರೆದು ಹಾಲನ್ನು ದೇವರು, ಪೂಜೆ ಹೆಸರಿನಲ್ಲಿ ಅನಗತ್ಯವಾಗಿ ಹಾಳು ಮಾಡುವ ಬದಲು ಮಕ್ಕಳಿಗೆ ಕುಡಿಸುವುದು ಸೂಕ್ತ ಎಂದು ಹೇಳಿದ ಶ್ರೀಗಳು, ಹಾವು ಸರೀಸೃಪ. ಅದು ಹಾಲು ಕುಡಿಯುವುದಿಲ್ಲ. ಹುಳು–ಹುಪ್ಪಡಿ ತಿನ್ನುತ್ತವೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಭಕ್ತಿ ಹೆಸರಿನಲ್ಲಿ ಆಡಂಬರ, ದುಂದುವೆಚ್ಚ ಸಲ್ಲ ಎಂದರು.

ದೇವರ ಮೇಲೆ ನಂಬಿಕೆ ಇದ್ದರೆ ನೈವೇದ್ಯ ಅರ್ಪಣೆ ಮಾಡಲಿ ಎಂದು ಸಲಹೆ ನೀಡಿದ ಅವರು, ಮುಂದಿನ ವರ್ಷ ಶಿಕ್ಷಣ ಸಚಿವ ಎನ್.ಮಹೇಶ ಅವರ ನೇತೃತ್ವದಲ್ಲಿ ಮಕ್ಕಳ ಪಂಚಮಿ ಆಚರಿಸಿ ಅಂದು ರಾಜ್ಯದ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಕೊಡಲಾಗುವುದು ಎಂದರು.

ಮೌಢ್ಯಾಚರಣೆ ಸಲ್ಲ: ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಮೌಢ್ಯಾಚರಣೆಗೆ ಒತ್ತು ನೀಡುತ್ತಿದ್ದಾರೆ. ಮಕ್ಕಳಾಗದವರಿಗೆ ಅಲ್ಲಿನ ಮರಗಳಿಗೆ ನಿಂಬೆಹಣ್ಣು ಕಟ್ಟಿಸುವ ಕೆಲಸ ಮಾಡಿಸುತ್ತಿದ್ದಾರೆ. ಬಸವಣ್ಣನ ಆಶಯಗಳಿಗೆ ವಿರುದ್ಧವಾದ ಆಚರಣೆಗಳನ್ನು ಅಲ್ಲಿ ಮಾಡದಂತೆ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದವರು ಕ್ರಮಕ್ಕೆ ಮುಂದಾಗಬೇಕಿದೆ. ಆ ಬಗ್ಗೆ ಆಯುಕ್ತ ಶಂಕರಗೌಡ ಸೋಮನಾಳ ಅವರ ಗಮನ ಸೆಳೆಯುವುದಾಗಿ ತಿಳಿಸಿದರು.

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !