ಹೋರಾಟಗಾರರ ಆದರ್ಶ ಮೈಗೂಡಿಸಿಕೊಳ್ಳಿ

7
ಸ್ವಾತಂತ್ರ್ಯ ಹೋರಾಟಗಾರ ಚೊಕ್ಕಹಳ್ಳಿಯ ಮಾರಪ್ಪನವರ ಮನೆಯಲ್ಲಿ ‘ಕಸಾಪ ನಡೆ ಸಾಧಕರ ಕಡೆ’ ಕಾರ್ಯಕ್ರಮ

ಹೋರಾಟಗಾರರ ಆದರ್ಶ ಮೈಗೂಡಿಸಿಕೊಳ್ಳಿ

Published:
Updated:
Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ಚೊಕ್ಕಹಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ಡಿ.ಮಾರಪ್ಪ ಅವರ ಮನೆಯಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ‘ಕಸಾಪ ನಡೆ ಸಾಧಕರ ಕಡೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಎಸ್.ಶಿವರಾಂ, ‘ಮಾರಪ್ಪನವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ನಮಗೆಲ್ಲ ಆದರ್ಶರಾಗಿದ್ದಾರೆ. 93 ವರ್ಷಗಳ ಇಳಿ ವಯಸ್ಸಲ್ಲೂ ಅವರು ಅವರು ಸದಾಕಾಲ ದೇಶದ ಹಿತವನ್ನೇ ಬಯಸುವುದು ನಮಗೆಲ್ಲ ಸ್ಫೂರ್ತಿದಾಯಕವಾಗಿದೆ. ವಿದ್ಯಾರ್ಥಿಗಳು ಇಂತಹ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾರಪ್ಪ, ‘ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಬೆಳೆಯಬೇಕು ಜಿಲ್ಲೆಯಲ್ಲಿ ಹುಟ್ಟಿದಂತಹ ಎಚ್.ನರಸಿಂಹಯ್ಯ, ಸರ್.ಎಂ.ವಿಶ್ವೇಶ್ವರಯ್ಯ ಅವರಂತಹ ಮೇರು ಪುರುಷರು ಹಾಕಿಕೊಟ್ಟಿರುವ ಶಿಸ್ತಿನ ಮಾರ್ಗದಲ್ಲಿ ನಡೆಯಬೇಕು. ಗಡಿ, ನೆಲ, ಜಲದ ವಿಚಾರಗಳಲ್ಲಿ ಸಮಸ್ಯೆಗಳು ಬಂದಾಗ ಹೋರಾಟಗಳನ್ನು ಮಾಡಿ ದೇಶವನ್ನು ಉಳಿಸುವ ಪಣ ತೊಡಬೇಕು’ ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಪ್ರವೀಣ್, ಸಹ ಕಾರ್ಯದರ್ಶಿ ಷಂಷುದ್ದೀನ್, ಸಾಯಿ ರಾಂ ಶಾಲೆಯ ಮಂಜುನಾಥ್, ಹಾಗೂ ಸಾಯಿ ರಾಂ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !