ಧ‌ರೆ ಕುಸಿತ; ಹಾಲೇರಿ, ಕಾಂಡನಕೊಲ್ಲಿ ಗ್ರಾಮವೇ ಖಾಲಿ

7

ಧ‌ರೆ ಕುಸಿತ; ಹಾಲೇರಿ, ಕಾಂಡನಕೊಲ್ಲಿ ಗ್ರಾಮವೇ ಖಾಲಿ

Published:
Updated:
Deccan Herald

ಸುಂಟಿಕೊಪ್ಪ: ನಿರಂತರ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಹಾಲೇರಿ ಮತ್ತು ಕಾಂಡನಕೊಲ್ಲಿಯಲ್ಲಿ ಹಲವು ಮನೆಗಳು ನೆಲಕಚ್ಚಿವೆ. ಇದರಿಂದ ಹೆದರಿದ ಈ ಭಾಗದ ಗ್ರಾಮಸ್ಥರು ತಮ್ಮ ಮನೆ, ಪ್ರಾಣಿ ಪಕ್ಷಿಗಳನ್ನು ಬಿಟ್ಟು ಆಶ್ರಯಕ್ಕಾಗಿ ಅಂಗಲಾಚುತ್ತಿದ್ದಾರೆ. ಶುಕ್ರವಾರ ಕಾಂಡನಕೊಲ್ಲಿಯ ಕೆಲವೆಡೆ ಮತ್ತೆ ಕುಸಿಯುತ್ತಿರುವುದರಿಂದ ಉಳಿದ ಗ್ರಾಮಸ್ಥರನ್ನು ಕೂಡ ಸುಂಟಿಕೊಪ್ಪಕ್ಕೆ ಸ್ಥಳಾಂತರಿಸಲಾಗಿದೆ.

ಒಂದೆಡೆ ಸೇತುವೆಯು ಒಡೆದು ಧಾರಾಕಾರವಾಗಿ ನೀರು ಹರಿಯುತ್ತಿರುವುದರಿಂದ ಅವರನ್ನು ಕಾಂಡನಕೊಲ್ಲಿಯ ಶಾಲೆಗಳಲ್ಲಿ ವಸತಿ ಕಲ್ಪಿಸಲಾಗಿತ್ತು. ಆದರೆ ಈ ಭಾಗದಲ್ಲೂ ಭೂಮಿ ನಡುಗುತ್ತಿರುವ ಅನುಭವ ಮತ್ತು ಬರೆ ಕುಸಿತ ಉಂಟಾಗುತ್ತಿರುವುದನ್ನು ಅರಿತ ಗ್ರಾಮಸ್ಥರು ರಕ್ಷಣೆಗಾಗಿ ಅಂಗಲಾಚಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಸುಂಟಿಕೊಪ್ಪದ ಮಣಿ ಮುಖೇಶ್, ಬಿ.ಟಿ.ರಮೇಶ್ ಪೂಜಾರಿ, ಸಾದಿಕ್, ಬಾಪು, ವಿಜಯ ಪೂಜಾರಿ, ಲಕ್ಷ್ಮಣ ಪೂಜಾರಿ, ಸತೀಶ್ ಪೂಜಾರಿ ಇವರು ಗ್ರಾಮಸ್ಥರನ್ನು ರಕ್ಷಿಸಿ ಜೀಪುಗಳಲ್ಲಿ ಕಳುಹಿಸುವ ಕಾರ್ಯದಲ್ಲಿ ನಿರತರಾದರು.

ಕುಶಾಲನಗರ ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್, ಜೊತೆಗಾರರಾದ ರಜಾಕ್, ಶೌಕತ್, ನಿರಂಜನ್ ಅಲ್ಲಲ್ಲಿ ಬೀಳುತ್ತಿದ್ದ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಲ್ಲದೇ, ತಮ್ಮ ವಾಹನದಲ್ಲೂ ಗ್ರಾಮಸ್ಥರನ್ನು ಕಳುಹಿಸುವ ನಿಟ್ಟಿನಲ್ಲಿ ಕೈಜೋಡಿಸಿ ಎಲ್ಲ ಸಂತ್ರಸ್ತರನ್ನು ಸುಂಟಿಕೊಪ್ಪಕ್ಕೆ ಕಳುಹಿಸಲಾಯಿತು.

ಇಡೀ ಗ್ರಾಮವೇ ಖಾಲಿ; ನಿರಂತರವಾಗಿ ಬರೆ ಕುಸಿದ ಹಿನ್ನಲೆಯಲ್ಲಿ ಹಾಲೇರಿ, ಕಾಂಡನಕೊಲ್ಲಿ ಇಡೀ ಗ್ರಾಮವೇ ಜನರಿಲ್ಲದೇ ಸ್ಮಶಾನ ಮೌನ ಆವರಿಸಿದೆ. ಪ್ರಾಣಿಗಳಿಗೆ ಜನರಿಲ್ಲದೇ ಆತಂಕಗೊಂಡು ಓಡಾಡುತ್ತಿರುವ ದೃಶ್ಯ ಮನಕಲುಕುವಂತಿತ್ತು.

ಕೊಡಗು ಸಹಾಯವಾಣಿ: 08272 221077
ಜಿಲ್ಲಾಧಿಕಾರಿ: Pi Shreevidya - 94826 28409
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ: Summan D. -94808 04901

ಇದನ್ನೂ ಓದಿ ...

ಕೊಡಗು ಜಿಲ್ಲೆಯಲ್ಲಿ ಮಳೆಗೆ ಸಿಲುಕಿದ್ದೀರಾ? ಸಹಾಯ ಮಾಡುವವರು ಇಲ್ಲಿದ್ದಾರೆ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !