ಮಕ್ಕಳ ಕಳ್ಳನೆಂದು ಆರೋಪಿಸಿ ಹಲ್ಲೆ

7
ಕೈಕಂಬದ ಗುರುಕಂಬಳ ಬಳಿ ಘಟನೆ

ಮಕ್ಕಳ ಕಳ್ಳನೆಂದು ಆರೋಪಿಸಿ ಹಲ್ಲೆ

Published:
Updated:
Deccan Herald

ಮಂಗಳೂರು: ಬಕ್ರೀದ್‌ ಸಂದರ್ಭದಲ್ಲಿ ಸಹಾಯ ಯಾಚಿಸಿ ಹೋಗಿದ್ದ ವ್ಯಕ್ತಿಯೊಬ್ಬರನ್ನು ಮಕ್ಕಳ ಕಳ್ಳನೆಂದು ಆರೋಪಿಸಿ ಕೈಕಂಬದ ಗುರುಕಂಬಳದ ಕೆಲವರು ಭಾನುವಾರ ಮಧ್ಯಾಹ್ನ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ಸುರತ್ಕಲ್‌ ಸಮೀಪದ ಕಾಟಿಪಳ್ಳ ನಿವಾಸಿ ಹಂಝ (63) ಹಲ್ಲೆಗೊಳಗಾದವರು. ಗುರುಕಂಬಳದ ಆರು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ಬಜ್ಪೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಅವರು ತಿಳಿಸಿದ್ದಾರೆ. ಹಲ್ಲೆಯ ದೃಶ್ಯಾವಳಿ ಇರುವ ವಿಡಿಯೊ ತುಣುಕು ಆಧರಿಸಿ ಇಬ್ಬರನ್ನು ಗುರುತಿಸಲಾಗಿದೆ ಎಂದು ಬಜ್ಪೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹಂಝ ಅವರ ಪರಿಚಯದ ತೌಸೀಫ್‌ ಎಂಬುವವರು ತಂಗಿಯ ಮದುವೆಗಾಗಿ ಮಾಡಿದ್ದ ಸಾಲ ತೀರಿಸಲಾಗದೇ ಸಂಕಷ್ಟದಲ್ಲಿದ್ದರು. ಮುಸ್ಲಿಮರಲ್ಲಿ ಬಕ್ರೀದ್‌ ಹಬ್ಬದ ಸಮಯದಲ್ಲೂ ದಾನ ಮಾಡುವ ಪ್ರವೃತ್ತಿ ಕೆಲವರಲ್ಲಿದೆ. ತೌಸೀಫ್‌ ಅವರು ಹಂಝ ಅವರನ್ನು ಕರೆದುಕೊಂಡು ಸಹಾಯ ಯಾಚನೆಗಾಗಿ ಭಾನುವಾರ ಮಧ್ಯಾಹ್ನ ಗುರುಕಂಬಳಕ್ಕೆ ಹೋಗಿದ್ದರು. ಮುಸ್ಲಿಮರ ಕೆಲವು ಮನೆಗಳಲ್ಲಿ ಸಹಾಯ ‍ಪಡೆದ ಇಬ್ಬರೂ, ಹಲ್ಲೆ ನಡೆಸಿದ ವ್ಯಕ್ತಿಗಳಿರುವ ಪ್ರದೇಶಕ್ಕೆ ಬಂದಿದ್ದರು.

ಆಗ ಮಕ್ಕಳ ಕಳ್ಳರು ಎಂದು ಹಂಝ ಮತ್ತು ತೌಸೀಫ್‌ ಮೇಲೆ ಆರೋಪಿಸಿದ ಕೆಲವರು ಹಲ್ಲೆಗೆ ಮುಂದಾದರು. ತೌಸೀಫ್‌ ಹೆದರಿ ಓಡಿಹೋದರು. ಕೈಗೆ ಸಿಕ್ಕ ಹಂಝ ಅವರನ್ನು ದೂರವಾಣಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ. ಕೆಲವರು ಬಂದು ಅವರನ್ನು ಬಿಡಿಸಿದ್ದಾರೆ. ನಂತರ ಬಜ್ಪೆ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !