ಕಾನೂನಿನ ಲಾಭ ಪಡೆಯಲು ಕರೆ

7

ಕಾನೂನಿನ ಲಾಭ ಪಡೆಯಲು ಕರೆ

Published:
Updated:

ಆಳಂದ: ಮಹಿಳೆಯರಿಗಾಗಿ ಜಾರಿಯಾದ ಕಾನೂನಿನ ಲಾಭ ಪಡೆಯಬೇಕು ಎಂದು ಸ್ಥಳೀಯ ದಿವಾಣಿ ನ್ಯಾಯಾಧೀಶ ಡಿ.ಪಿ.ನಾಯಕ ಕರೆ ನೀಡಿದರು.ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಗುರುವಾರ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಮಕ್ಕಳ ಮತ್ತು ಕಲ್ಯಾಣ ಯೋಜನೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮತ್ತು ಅಂಬವ್ವ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರು ಕಾನೂನು ತಿಳಿದುಕೊಂಡರೆ ಸಮಾಜದಲ್ಲಿ ಬದುಕು ಸರಳವಾಗುತ್ತದೆ. ಇಲ್ಲವಾದಲ್ಲಿ ಜೀವನ ಅಡ್ಡಮಾರ್ಗದಿಂದ ನಡೆದು ಅಪರಾಧಕ್ಕೆ ಗುರಿಯಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಕಿರಿಯ ಶ್ರೇಣಿ ನ್ಯಾಯಾಧೀಶ ಚಂದ್ರಪ್ಪ ಆರ್. ಹೊನ್ನೂರ ಮಾತನಾಡಿ, ಅತ್ತೆ, ಮಾವ, ಗಂಡನಿಂದ ಕೌಟುಂಬಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು ರಕ್ಷಣೆ ನೀಡುತ್ತದೆ.  ಅನ್ಯಾಯ ಸಹಿಸಿಕೊಳ್ಳದೆ ನ್ಯಾಯಕ್ಕಾಗಿ ಮುಂದೆ ಬರಬೇಕು ಎಂದರು.ತಹಸೀಲ್ದಾರ ಡಾ. ನಾಗೇಂದ್ರ ಹೊನ್ನಳ್ಳಿ ಮಾತನಾಡಿ, ಪ್ರತಿಯೊಬ್ಬರು ಕಾನೂನಿನ ಜ್ಞಾನ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ ಮಾತನಾಡಿ, ನ್ಯಾಯಾಧೀಶರು, ವಕೀಲರು ಜನರ ಮನೆ ಬಾಗಿಲಿಗೆ ಬಂದು ಕಾನೂನು ತಿಳಿವಳಿಕೆ ನೀಡುತ್ತಿದ್ದು. ಅದರ ಲಾಭ ಪಡೆದುಕೊಳ್ಳಬೇಕು ಎಂದರು.ಸರ್ಕಾರಿ ವಕೀಲ ಪಿ.ಪಿ. ಮಂಜುನಾಥ, ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಣ್ಣ ಮುದ್ದಡಗಿ ಮಾತನಾಡಿದರು.ಜನನ ಮರಣ ಕಾಯ್ದೆ ಕುರಿತು ಬಿ.ಜಿ. ಬೀಳಗಿ, ಕೌಟುಂಬಿಕ ದೌರ್ಜನ್ಯ ಕಾಯ್ದೆ ವಿಷಯವಾಗಿ ದೇವಾನಂದ ಎಚ್. ಹೋದಲೂರಕರ್ ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಡಿ. ಬೋಸಗೆ, ಎಂ.ಕೆ. ಪಾಟೀಲ, ಮಲ್ಲೇಶಪ್ಪ ಬಿರಾದಾರ, ಸುನಂದಾ ಮತ್ತು ಪಾರ್ವತಿ ಹೊನ್ನೂರೆ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry