ಅಮೃತಾ ಎಂಜಿನಿಯರಿಂಗ್ ಕಾಲೇಜು ಮಾರಾಟ ಪ್ರಕರಣ: ಹೇಳಿಕೆ ದಾಖಲಿಸಲು ಕೋರ್ಟ್ ಸೂಚನೆ

7
ಬಿ ರಿಪೋರ್ಟ್ ವಜಾ

ಅಮೃತಾ ಎಂಜಿನಿಯರಿಂಗ್ ಕಾಲೇಜು ಮಾರಾಟ ಪ್ರಕರಣ: ಹೇಳಿಕೆ ದಾಖಲಿಸಲು ಕೋರ್ಟ್ ಸೂಚನೆ

Published:
Updated:

ಬಾಗಲಕೋಟೆ: ಕೇಂದ್ರ ಸಚಿವ ಅನಂತಕುಮಾರ್ ಪತ್ನಿ ತೇಜಸ್ವಿನಿ ಹಾಗೂ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಆರು ಮಂದಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ಶನಿವಾರ ಇಲ್ಲಿನ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಎರಡನೇ ಬಾರಿಗೆ ವಜಾಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರೂ ಆದ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯ ಮಲ್ಲಣ್ಣ ಜಿಗಳೂರ ಅವರ ಹೇಳಿಕೆಯನ್ನು ಅಕ್ಟೋಬರ್ 20ರಂದು ದಾಖಲಿಸಿಕೊಳ್ಳುವುದಾಗಿ ನ್ಯಾಯಾಲಯ ಹೇಳಿದೆ.

ತೇಜಸ್ವಿನಿ ಅನಂತಕುಮಾರ ನಿರ್ದೇಶಕರಾಗಿರುವ ನಾಲೆಡ್ಜ್ ಪಾರ್ಕ್ ಆಫ್ ಇಂಡಿಯಾ ಟ್ರಸ್ಟ್ ಬೆಂಗಳೂರಿನ ಬಿಡದಿಯಲ್ಲಿ ಆರಂಭಿಸಿದ್ದ ಅಮೃತಾ ಎಂಜಿನಿಯರಿಂಗ್ ಕಾಲೇಜನ್ನು ವೀರಣ್ಣ ಚರಂತಿಮಠ ಕಾರ್ಯಾಧ್ಯಕ್ಷರಾಗಿರುವ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಖರೀದಿಸಿದೆ.

’ಖರೀದಿ ವೇಳೆ ಆಸ್ತಿಯ ವಾಸ್ತವಿಕ ಮೌಲ್ಯಕ್ಕಿಂತ ಹೆಚ್ಚಿನ ಬೆಲೆ ನಿಗದಿಪಡಿಸಲಾಗಿದೆ. ಇದರಲ್ಲಿ ಅಕ್ರಮ ನಡೆದಿದ್ದು, ಸಂಬಂಧಿಸಿದವರ ವಿರುದ್ಧ ತನಿಖೆ ನಡೆಸುವಂತೆ’ ಮಲ್ಲಣ್ಣ 2014ರಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಕೋರ್ಟ್‌ನ ಆದೇಶದ ಮೇರೆಗೆ ತೇಜಸ್ವಿನಿ ಅನಂತಕುಮಾರ, ವೀರಣ್ಣ ಚರಂತಿಮಠ ಸೇರಿದಂತೆ ವೀರಣ್ಣ ಹಲಕುರ್ಕಿ, ಮಹೇಶ ಅಥಣಿ, ಜಿ.ಆರ್.ನಾರಾಯಣ್‌ ಹಾಗೂ ಕೆ.ಹರೀಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಈ ಹಿಂದೆಯೂ ಬಿ ರಿಪೋರ್ಟ್ ಸಲ್ಲಿಸಿದ್ದರು. ಆಗಲೂ ಅದನ್ನು ವಜಾಗೊಳಿಸಿ ಮರು ತನಿಖೆಗೆ ಆದೇಶಿಸಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !