30 ಕುಟುಂಬಗಳಿಗೆ ಹಾಕಿದ್ದ ಬಹಿಷ್ಕಾರ ತೆರವು

7
ನಂಜನಗೂಡು ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆ ಸುಖಾಂತ್ಯ

30 ಕುಟುಂಬಗಳಿಗೆ ಹಾಕಿದ್ದ ಬಹಿಷ್ಕಾರ ತೆರವು

Published:
Updated:
Deccan Herald

ನಂಜನಗೂಡು: ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಗಾಣಿಗ ಸಮಾಜದ 30 ಕುಟುಂಬಗಳಿಗೆ ಚಿಕ್ಕದೇವಿ ಹಬ್ಬದಲ್ಲಿ ಪಾಲ್ಗೊಳ್ಳದಂತೆ ಗ್ರಾಮಸ್ಥರು ಹಾಕಿದ್ದ ಬಹಿಷ್ಕಾರವನ್ನು ಹಿಂಪಡೆದರು.

ಬದನವಾಳು ಗ್ರಾಮದಲ್ಲಿ ಗಾಣಿಗ ಸಮುದಾಯದ 80 ಕುಟುಂಬಗಳು ವಾಸಿಸುತ್ತಿದ್ದು, ಪ್ರತಿವರ್ಷ ಗ್ರಾಮದಲ್ಲಿರುವ ಚಿಕ್ಕಮ್ಮ ಚಿಕ್ಕದೇವಿ ದೇವಾಲಯದಲ್ಲಿ ದೇವಿ ಹಬ್ಬ ಆಚರಿಸಲಾಗುತ್ತದೆ. ಅದರಂತೆ, ಮೂರು ವರ್ಷದ ಹಿಂದೆ ಹಬ್ಬ ಆಚರಣೆಗಾಗಿ ಎತ್ತಿದ್ದ ಚಂದಾ ಹಣದ ಲೆಕ್ಕ ಕೊಡುವಂತೆ ರಾಜಣ್ಣ ಅವರು ಕೇಳಿದ ಕಾರಣವನ್ನೇ ನೆಪ ಮಾಡಿಕೊಂಡು ಕಳೆದೆರೆಡು ವರ್ಷಗಳಿಂದ 30 ಕುಟುಂಬಗಳಿಗೆ ಹಬ್ಬದಲ್ಲಿ ಪಾಲ್ಗೊಳ್ಳದಂತೆ ಬಹಿಷ್ಕಾರ ಹಾಕಿದ್ದರು.

ಈ ವರ್ಷವೂ ಅ.11 ಹಾಗೂ 12 ರಂದು  ದೇವಿಹಬ್ಬ ಆಯೋಜಿಸಿದ್ದು ಅದರಲ್ಲಿ ಪಾಲ್ಗೊಳ್ಳದಂತೆ 30 ಕುಟುಂಬಗಳಿಗೆ ತಡೆಯೊಡ್ಡಿದ್ದರು. ಈ ಕುರಿತು ರಾಜಣ್ಣ ಅವರು ತಹಶೀಲ್ದಾರ್ ಎಂ.ದಯಾನಂದ್ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ತಹಶೀಲ್ದಾರ್ ಕಚೇರಿಯಲ್ಲಿ ಎರಡು ಗುಂಪುಗಳ ಯಜಮಾನರ ಸಭೆ ನಡೆಯಿತು.

ಹಬ್ಬಕ್ಕೆ ಬಹಿಷ್ಕಾರ ವಿಧಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಬಹಿಷ್ಕಾರ ತೆರವುಗೊಳಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಚ್ಚರಿಕೆ ನೀಡಿದ ಎಂ.ದಯಾನಂದ, ಗ್ರಾಮದಲ್ಲಿ ಸಮಾಜದ ಏಲ್ಲ ಕುಟುಂಬಗಳು ಒಟ್ಟಾಗಿ ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸುವಂತೆ ತಿಳಿವಳಿಕೆ ನೀಡಿದರು.

ಬಳಿಕ 80 ಕುಟುಂಬಗಳು ಒಟ್ಟಾಗಿ ಹಬ್ಬ ಆಚರಿಸುತ್ತೇವೆ ಎಂದು ಒಪ್ಪಿಕೊಂಡು ಬಹಿಷ್ಕಾರ ಹಿಂಪಡೆದರು. ಸಿ.ಪಿ.ಐ. ಶೇಖರ್, ಬಳಿಗೆರೆ ಪೊಲೀಸ್ ಠಾಣೆ ಪಿ.ಎಸ್.ಐ. ರವಿಶಂಕರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !