ಜೈಲಿನೊಳಕ್ಕೆ ಗಾಂಜಾ ಸಾಗಿಸಲು ಯತ್ನ: ಯುವತಿಯ ಬಂಧನ

7

ಜೈಲಿನೊಳಕ್ಕೆ ಗಾಂಜಾ ಸಾಗಿಸಲು ಯತ್ನ: ಯುವತಿಯ ಬಂಧನ

Published:
Updated:

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನಿಗೆ ಗಾಂಜಾ ಮತ್ತು ಮೊಬೈಲ್‌ ಪೂರೈಸಲು ಯತ್ನಿಸಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕಾರಾಗೃಹದಲ್ಲಿರುವ ಮುಸ್ತಾಫ ಎಂಬ ವಿಚಾರಣಾಧೀನ ಕೈದಿಯನ್ನು ಭೇಟಿ ಮಾಡಲು ವಿದ್ಯಾರ್ಥಿನಿ ಗುರುವಾರ ಬಂದಿದ್ದಳು. ಭೇಟಿಗೆ ಅವಕಾಶವನ್ನೂ ಪಡೆದಿದ್ದಳು. ಆಕೆ ಗಾಂಜಾ ಮತ್ತು ಮೊಬೈಲ್‌ ಪೂರೈಸಲು ಯತ್ನಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಮ, ಸಬ್ ಇನ್‌ಸ್ಪಕ್ಟರ್‌ ಶ್ಯಾಮ್‌ಸುಂದರ್‌ ಮತ್ತು ಸಿಬ್ಬಂದಿ ವಶಕ್ಕೆ ಪಡೆದರು.

‘ಯುವತಿಯನ್ನು ತಪಾಸಣೆ ನಡೆಸಿದಾಗ ಆಕೆಯ ಬಳಿ 20 ಗ್ರಾಂ. ಗಾಂಜಾ ಮತ್ತು ಮೊಬೈಲ್‌ ಫೋನ್ ಇತ್ತು. ಅದನ್ನು ಮುಸ್ತಾಫ ಎಂಬ ಕೈದಿಗೆ ನೀಡಲು ತಂದಿರುವುದಾಗಿ ಒಪ್ಪಿಕೊಂಡಳು. ತಕ್ಷಣ ಆಕೆಯನ್ನು ಬರ್ಕೆ ಪೊಲೀಸ್‌ ಠಾಣೆಯ ವಶಕ್ಕೆ ನೀಡಲಾಯಿತು. ಅಲ್ಲಿ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿಗೆ ಗಾಂಜಾ ಪೂರೈಸಿದ ಆರೋಪಿಗಳ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಯುವತಿ ನೀಡುವ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !