ಗ್ರಾಮೀಣ ದಸರಾ ಪ್ರಯುಕ್ತ ನಡೆದ ವಿವಿಧ ಕ್ರೀಡಾಕೂಟ

7

ಗ್ರಾಮೀಣ ದಸರಾ ಪ್ರಯುಕ್ತ ನಡೆದ ವಿವಿಧ ಕ್ರೀಡಾಕೂಟ

Published:
Updated:
Deccan Herald

ಕೆ.ಆರ್.ನಗರ: ಇಲ್ಲಿನ ರೇಡಿಯೋ ಮೈದಾನದಲ್ಲಿ ಗ್ರಾಮೀಣ ದಸರಾ ಪ್ರಯುಕ್ತ ಶುಕ್ರವಾರ ವಿವಿಧ ಕ್ರೀಡಾಕೂಟ ಏರ್ಪಡಿಸಲಾಗಿತ್ತು.

ಮಹಿಳೆಯರಿಗಾಗಿ: ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಚಮಚದ ಮೇಲೆ ನಿಂಬೆಹಣ್ಣು ಇಟ್ಟು ನಡೆಯುವ ಸ್ಪರ್ಧೆ, ಒಂಟಿ ಕಾಲಿನ ಓಟದ ಸ್ಪರ್ಧೆ, ಕಪ್ಪೆ ಜಿಗಿತದ ಓಟದ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಜನಪದ ಗೀತೆ ಸ್ಪರ್ಧೆ, ಸೋಬಾನೆ ಪದ ಸ್ಪರ್ಧೆ, ಹಗ್ಗಜಗ್ಗಾಟ ಸ್ಪರ್ಧೆ.

ಮಕ್ಕಳಿಗೆ: ಒಂಟಿ ಕಾಲಿನ ಓಟದ ಸ್ಪರ್ಧೆ, ಗೋಣಿ ಚೀಲ ಓಟದ ಸ್ಪರ್ಧೆ, ಕೆರೆದಡ ಸ್ಪರ್ಧೆ, ಲಕ್ಕಿಕಾರ್ನರ್ ಸ್ಪರ್ಧೆ. ರೈತರಿಗೆ: ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಒಂಟಿ ಕಾಲಿನ ಓಟದ ಸ್ಪರ್ಧೆ, ಗೋಣಿ ಚೀಲ ಓಟದ ಸ್ಪರ್ಧೆ, ನಿಧಾನಗತಿಯಲ್ಲಿ ಸೈಕಲ್ ಓಡಿಸುವ ಸ್ಪರ್ಧೆ, ಹಗ್ಗಜಗ್ಗಾಟ ಸ್ಪರ್ಧೆ, ಸ್ಥಳೀಯ ಕಲೆಗಳ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಳೆದ ಎರಡು ದಿನಗಳಿಂದ ತಾಲ್ಲೂಕಿನ ಹೆಬ್ಬಾಳು, ಚುಂಚನಕಟ್ಟೆ, ಮಿರ್ಲೆ, ಸಾಲಿಗ್ರಾಮ, ಹೊಸ ಅಗ್ರಹಾರ, ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಹೋಬಳಿ ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳನ್ನು ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !