ಬುಧವಾರ, ಡಿಸೆಂಬರ್ 2, 2020
17 °C

ಬಿಟಿಸಿ: ಚಳಿಗಾಲದ ರೇಸ್‌ಗಳು ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು:  ಚಳಿಗಾಲದ ರೇಸ್‌ಗಳು ಶುಕ್ರವಾರದಿಂದ ಆರಂಭವಾಗಲಿವೆ. ಈ ಬಾರಿ ಉತ್ತಮ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ಬೆಂಗಳೂರು ಟರ್ಫ್‌ ಕ್ಲಬ್ (ಬಿಟಿಸಿ) ಅಧ್ಯಕ್ಷ ಹರಿಮೋಹನ್ ನಾಯ್ಡು ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಎಸ್‌ಟಿಯಿಂದಾಗಿ ಉಂಟಾಗಿರುವ ಆರ್ಥಿಕ ಹೊರೆಯನ್ನು ನಿಭಾಯಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ನಡುವೆ ಬೆಳಗಾವಿ ಮತ್ತು ಮಂಗಳೂರಿನಲ್ಲಿ ಆಫ್‌ಕೋರ್ಸ್ ಬೆಟ್ಟಿಂಗ್ ಕೇಂದ್ರಗಳ ಆರಂಭಕ್ಕೆ ಸರ್ಕಾರದ ಅನುಮತಿ ಪಡೆಯಲಾಗುತ್ತಿದೆ. ಉತ್ತರ ಕರ್ನಾಟಕದ ಕೆಲವು ಊರುಗಳಲ್ಲಿಯೂ ಕೇಂದ್ರಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ’ ಎಂದರು.

‘ಶುಕ್ರವಾರದಿಂದ ಚಳಿಗಾಲದ ರೇಸ್‌ಗಳು ಆರಂಭವಾಗಲಿವೆ. ಮುಂದಿನ ಮಾರ್ಚ್‌ 22ರಂದು ಕೊನೆಗೊಳ್ಳಲಿದೆ.  ಈ ಅವಧಿಯಲ್ಲಿ ಒಟ್ಟು 26 ರೇಸ್‌ ದಿನಗಳು  ಇರಲಿವೆ.  ಸುಮಾರು ರೂ.15.50 ಕೋಟಿಗಳಷ್ಟು ಹಣ ಹೂಡಿಕೆ ಮಾಡಲಾಗುತ್ತಿದೆ. ಕಳೆದ ಅವಧಿಯಲ್ಲಿ ಸುಮಾರು ₹ 11.31 ಕೋಟಿಗಳನ್ನು 17 ರೇಸ್‌ ದಿನಗಳಲ್ಲಿ ನಡೆದ ರೇಸ್‌ಗಳಿಗೆ ನೀಡಲಾಗಿತ್ತು.  ಆದರೆ, ಹಿಂದಿನ ಚಳಿಗಾಲದ ಅವಧಿಯಲ್ಲಿ ನೀಡಿದ್ದ ಎಲ್ಲಾ ವರ್ಗಗಳ ರೇಸ್‌ಗಳಿಗೆ ನೀಡಲಾಗಿದ್ದ ಬಹುಮಾನದ ಮೊತ್ತವನ್ನೇ ಈ ಅವಧಿಯಲ್ಲೂ ವಿತರಿಸಲಾಗುವುದು’ ಎಂದು ತಿಳಿಸಿದರು.

‘ಬೆಂಗಳೂರು 1000 ಗಿನ್ನೀಸ್‌, ಬೆಂಗಳೂರು 2000 ಗಿನ್ನೀಸ್‌, ಬೆಂಗಳೂರು ಓಕ್ಸ್‌ ಮತ್ತು ಕೆಟಲಿಸ್ಟ್‌ ಪ್ರಾಪರ್ಟೀಸ್‌ ಬೆಂಗಳೂರು ಡರ್ಬಿ ರೇಸ್‌ಗಳು ಪ್ರಮುಖ ಕ್ಲಾಸಿಕ್‌ ರೇಸ್‌ಗಳಾಗಿವೆ.  ಡರ್ಬಿ ರೇಸ್‌ ಅನ್ನು ಕೆಟಲಿಸ್ಟ್‌ ಪ್ರಾಪರ್ಟೀಸ್‌ ಸಹ ಪ್ರಾಯೋಜಕತ್ವದೊಂದಿಗೆ ಏರ್ಪಡಿಸಲಾಗಿದೆ.  ಈ ಪ್ರತಿಷ್ಠಿತ ಕೆಟಲಿಸ್ಟ್‌ ಪ್ರಾಪರ್ಟೀಸ್‌ ಬೆಂಗಳೂರು ಡರ್ಬಿ ರೇಸ್‌ ಅನ್ನು ಸಂಪ್ರದಾಯದಂತೆ 26ನೇ ಜನವರಿಯಂದು ನಡೆಸಲಾಗುವುದು’ ಎಂದರು.

‘ಸುಮಾರು 750 ಕುದುರೆಗಳು ಭಾಗವಹಿಸಲಿವೆ. ’ಬಿ’ ದರ್ಜೆಯ ಟ್ರೈನರ್‌ಗಳಲ್ಲದೆ, ಸುಮಾರು 37 ’ಎ’ ದರ್ಜೆಯ ಟ್ರೈನರ್‌ಗಳು ಮತ್ತು ಸುಮಾರು 100 ಸಂಖ್ಯೆಯ ಎಲ್ಲಾ ವರ್ಗದ ಜಾಕಿಗಳು ಭಾಗವಹಿಸಲಿದ್ದಾರೆ. ಬಿ.ಟಿ.ಸಿ ಆವರಣದಲ್ಲಿ ಸುಮಾರು 640 ಮತ್ತು ಆಫ್‌ಕೋರ್ಸ್‌ ಸೆಂಟರ್‌ಗಳಲ್ಲಿ ಸುಮಾರು 100 ಬೆಟ್ಟಿಂಗ್‌ ಟರ್ಮಿನಲ್ಸ್‌ಗಳು ಕಾರ್ಯಾಚರಣೆಯಲ್ಲಿರುತ್ತವೆ’ ಎಂದು ನಾಯ್ಡು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು