ದಂಗೆಗೆ ಬಾಹ್ಯ ಶಕ್ತಿಗಳ ಕುಮ್ಮಕ್ಕು: ಬಿಪಿನ್ ರಾವತ್‌

7

ದಂಗೆಗೆ ಬಾಹ್ಯ ಶಕ್ತಿಗಳ ಕುಮ್ಮಕ್ಕು: ಬಿಪಿನ್ ರಾವತ್‌

Published:
Updated:

ನವದೆಹಲಿ: ಅಸ್ಸಾಂ ಮತ್ತು ಪಂಜಾಬ್‌ನಲ್ಲಿ ದಂಗೆ ಹುಟ್ಟುಹಾಕಲು ಬಾಹ್ಯಶಕ್ತಿಗಳು ಷಡ್ಯಂತ್ರ ನಡೆಸಿವೆ ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಶನಿವಾರ ಬಹಿರಂಗಪಡಿಸಿದ್ದಾರೆ.

ಹಿರಿಯ ಸೇನಾಧಿಕಾರಿಗಳು, ರಕ್ಷಣಾ ತಜ್ಞರು ಮತ್ತು ನಿವೃತ್ತ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಆಯೋಜಿಸಿದ್ದ ‘ಭಾರತದಲ್ಲಿ ಬದಲಾಗುತ್ತಿರುವ ಆಂತರಿಕ ಭದ್ರತೆ: ಪ್ರವೃತ್ತಿಗಳು ಮತ್ತು ಪ್ರತಿಕ್ರಿಯೆಗಳು' ಎಂಬ ವಿಷಯ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು. 

‘ಸದ್ಯ ಪಂಜಾಬ್‌ನಲ್ಲಿ ಶಾಂತಿ ನೆಲೆಸಿದ್ದು ಪರಿಸ್ಥಿತಿ ಸರಿಹೋಗಿದೆ ಎಂದು ಮೈಮರೆಯಬಾರದು’ ಎಂದು ಸಲಹೆ ನೀಡಿದರು. ‘ಆಂತರಿಕ ಭದ್ರತೆಯು ದೇಶದಲ್ಲಿನ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಇದಕ್ಕೆ ಬಾಹ್ಯ ಶಕ್ತಿಗಳ ಕುಮ್ಮಕ್ಕು ಇರುವುದರಿಂದ ಇದಕ್ಕೆ ಪರಿಹಾರ ಕಂಡುಹಿಡಿಯಲು ಈವರೆಗೂ ಸಾಧ್ಯವಾಗಿಲ್ಲ’ ಎಂದು ರಾವತ್‌ ಹೇಳಿದರು.

Tags: 

ಬರಹ ಇಷ್ಟವಾಯಿತೆ?

  • 4

    Happy
  • 0

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !