ಬ್ಯಾಡ್ಮಿಂಟನ್: ಮೈಸೂರು ವಿಭಾಗ ಚಾಂಪಿಯನ್

7
ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ಬ್ಯಾಡ್ಮಿಂಟನ್

ಬ್ಯಾಡ್ಮಿಂಟನ್: ಮೈಸೂರು ವಿಭಾಗ ಚಾಂಪಿಯನ್

Published:
Updated:
Deccan Herald

ಮೂಡುಬಿದಿರೆ: ಮೈಸೂರು ವಿಭಾಗವು ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಇಲ್ಲಿ ನಡೆದ ರಾಜ್ಯ ಮಟ್ಟದ ಪ್ರೌಢಶಾಲಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಯಿತು.

ಇಲ್ಲಿಗೆ ಸಮೀಪದ ಅಳಿಯೂರಿನಲ್ಲಿ ಶನಿವಾರ ಮುಕ್ತಾಯದ ಫೈನಲ್‌ನಲ್ಲಿ ಬಾಲಕರ ವಿಭಾಗದ ಮೈಸೂರು ತಂಡವು 35- 24, 35- 26 ರಲ್ಲಿ ಬೆಂಗಳೂರನ್ನು ಮಣಿಸಿತು. ಕಲಬುರ್ಗಿ ತಂಡವು 35- 27, 35-33 ರಲ್ಲಿ ಬೆಂಗಳೂರು ತಂಡ ಪರಾಭವಗೊಂಡಿತು. ಮೈಸೂರು ತಂಡವು 32-35, 35-33 ರಲ್ಲಿ  ಬೆಳಗಾವಿಯನ್ನು, ಬೆಳಗಾವಿ ತಂಡವು 35-18, 35-08 ರಲ್ಲಿ ಬೆಂಗಳೂರನ್ನು ಮಣಿಸಿತು.

ಬಾಲಕಿಯರ ವಿಭಾಗದಲ್ಲಿ ಮೈಸೂರು 35-27, 35-11 ರಲ್ಲಿ ಬೆಳಗಾವಿಯನ್ನು, ಮೈಸೂರು ತಂಡ 35-19, 35-22 ರಲ್ಲಿ ಕಲಬುರ್ಗಿಯನ್ನು, ಬೆಂಗಳೂರು 35-24, 35-27 ರಲ್ಲಿ ಕಲಬುರ್ಗಿಯನ್ನು, ಬೆಂಗಳೂರು 35-22, 27-35 ರಲ್ಲಿ ಬೆಳಗಾವಿ
ಯನ್ನು, ಬೆಳಗಾವಿ ತಂಡ 35-20, 35-14 ಕಲಬುರ್ಗಿಯನ್ನು ಮಣಿಸಿತು.

ಬಾಲಕರ ವಿಭಾಗ: ಬೆಳಗಾವಿ– ದ್ವಿತೀಯ, ಕಲಬುರ್ಗಿ– ತೃತೀಯ. 

ಬಾಲಕಿಯರು: ಬೆಂಗಳೂರು–ದ್ವಿತೀಯ, ಬೆಳಗಾವಿ– ತೃತೀಯ ಸ್ಥಾನ ಪಡೆದುಕೊಂಡವು. ಉತ್ತಮ ಆಟಗಾರರಾಗಿ ಮೈಸೂರು ವಿಭಾಗದ ನಂದನ್ ಮತ್ತು ಶ್ರುತಿ ಹೊರಹೊಮ್ಮಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !