‘ಡಾಲರ್‌’ ಆಸೆಗೆ ‘₹2 ಲಕ್ಷ’ ಕಳಕೊಂಡ

7
ಆಟೊ ಚಾಲಕನಿಗೆ ವಂಚನೆ; ವಿವೇಕನಗರ ಠಾಣೆಯಲ್ಲಿ ಪ್ರಕರಣ

‘ಡಾಲರ್‌’ ಆಸೆಗೆ ‘₹2 ಲಕ್ಷ’ ಕಳಕೊಂಡ

Published:
Updated:

ಬೆಂಗಳೂರು: ತನ್ನ ಬಳಿ 600 ಡಾಲರ್ ನೋಟುಗಳಿರುವುದಾಗಿ ಹೇಳಿ ನಂಬಿಸಿದ್ದ ಮಹಿಳೆಯೊಬ್ಬಳು, ನಗರದ ಆಟೊ ಚಾಲಕ ಕೃಷ್ಣೇಗೌಡ ಎಂಬುವರಿಂದ ₹2 ಲಕ್ಷ ಪಡೆದುಕೊಂಡು ವಂಚಿಸಿದ್ದಾಳೆ.

ಸುಂಕದಕಟ್ಟೆ ನಿವಾಸಿ ಕೃಷ್ಣೇಗೌಡ, ತಮಗಾದ ವಂಚನೆ ಬಗ್ಗೆ ವಿವೇಕನಗರ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿತ ಮಹಿಳೆ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ತಲೆ ಮರೆಸಿಕೊಂಡಿದ್ದಾರೆ.

‘ಕೃಷ್ಣೇಗೌಡ, ಅಕ್ಟೋಬರ್ 26ರಂದು ಬೆಳಿಗ್ಗೆ ಕೆ.ಆರ್‌. ಮಾರುಕಟ್ಟೆ ಬಳಿ ಆಟೊ ನಿಲ್ಲಿಸಿಕೊಂಡಿದ್ದರು. 30 ವರ್ಷದ ಮಹಿಳೆ, ಆಟೊವನ್ನು ಬಾಡಿಗೆ ಪಡೆದು ವಿವೇಕನಗರ ಚರ್ಚ್‌ ಬಳಿ ಕರೆದೊಯ್ದಿದ್ದಳು. ನಿಗದಿತ ಸ್ಥಳ ಬರುತ್ತಿದ್ದಂತೆ ಚಾಲಕ, ಬಾಡಿಗೆ ಕೇಳಿದಾಗ 20 ಡಾಲರ್‌ ನೋಟು ಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ಡಾಲರ್‌ ಚಲಾವಣೆಯಲ್ಲಿ ಇಲ್ಲ. ರೂಪಾಯಿ ನೋಟು ಕೊಡಿ’ ಎಂದು ಚಾಲಕ ಕೃಷ್ಣೇಗೌಡ ಕೇಳಿದ್ದರು. ‘ನನ್ನ ಬಳಿ ರೂಪಾಯಿ ಹಣವಿಲ್ಲ. ಡಾಲರ್‌ ಪರಿವರ್ತನೆ ಮಾಡುವ ಜಾಗವಿದ್ದರೆ, ಅಲ್ಲೀಗೆ ಕರೆದುಕೊಂಡು ಹೋಗು’ ಎಂದು ಮಹಿಳೆ ಹೇಳಿದ್ದರು. ಆಕೆಯನ್ನು ಎಂ.ಜಿ.ರಸ್ತೆಗೆ ಕರೆದೊಯ್ದಿದ್ದ ಚಾಲಕ, ಡಾಲರ್‌ನ್ನು ರೂಪಾಯಿಗೆ ಪರಿವರ್ತಿಸಿಕೊಟ್ಟಿದ್ದರು. ನಂತರ, ತಮ್ಮ ಬಾಡಿಗೆ ₹350 ಪಡೆದುಕೊಂಡಿದ್ದರು’.

‘ನಾನು ಕೆಲಸ ಮಾಡುವ ಸ್ಥಳದಲ್ಲಿ ವೇತನವನ್ನು ಡಾಲರ್‌ ರೂಪದಲ್ಲಿ ಕೊಡುತ್ತಾರೆ. ಅಂಥ 500–600 ಡಾಲರ್‌ ನೋಟುಗಳು ನನ್ನ ಬಳಿ ಇವೆ. ಅವುಗಳನ್ನು ನಿಮಗೆ ಕೊಡುತ್ತೇನೆ. ಪರಿವರ್ತನೆ ಮಾಡಿಸಿಕೊಡಿ’ ಎಂದಿದ್ದ ಮಹಿಳೆ, ತನ್ನ ಪರಿಚಯಸ್ಥರಿಗೆ ಮೊಬೈಲ್ ಕರೆ ಮಾಡಿ ಕೃಷ್ಣೇಗೌಡರಿಗೆ ಕೊಟ್ಟಿದ್ದರು.

‘ಮಹಿಳೆಯ ಡಾಲರ್‌ ನೋಟುಗಳು ನನ್ನ ಬಳಿ ಇವೆ. ನೀವು ₹2 ಲಕ್ಷ ಕೊಟ್ಟರೆ, ಎಲ್ಲ ನೋಟುಗಳನ್ನು ನಿಮಗೆ ಕೊಡುತ್ತೇನೆ. ನೀವೇ ಪರಿವರ್ತಿಸಿಕೊಂಡು ಉಳಿದ ಹಣ ಇಟ್ಟುಕೊಳ್ಳಿ’ ಎಂದು ಆ ಪರಿಚಯಸ್ಥ ಹೇಳಿದ್ದ. ಅದನ್ನು ನಂಬಿದ್ದ ಕೃಷ್ಣೇಗೌಡ, ₹2 ಲಕ್ಷ ಹಣದ ಸಮೇತ ನ. 1ರಂದು ವಿವೇಕನಗರದ ಚರ್ಚ್‌ ಬಳಿ ಹೋಗಿದ್ದರು. ಇಬ್ಬರು ಪುರುಷರೊಂದಿಗೆ ಸ್ಥಳಕ್ಕೆ ಬಂದಿದ್ದ ಮಹಿಳೆ ಬ್ಯಾಗೊಂದನ್ನು ಕೊಟ್ಟು ‘ಇದರಲ್ಲಿ ಡಾಲರ್‌ ನೋಟುಗಳಿವೆ’ ಎಂದು ಹೇಳಿ ಕೃಷ್ಣೇಗೌಡ ಬಳಿಯ ಹಣ ತೆಗೆದುಕೊಂಡು ಹೊರಟು ಹೋಗಿದ್ದರು’ ಎಂದು ಪೊಲೀಸರು ವಿವರಿಸಿದರು. 

ಬರಹ ಇಷ್ಟವಾಯಿತೆ?

 • 3

  Happy
 • 6

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !