ಪ್ರೊ ಕಬಡ್ಡಿ: ಯು ಮುಂಬಾ ಜಯಭೇರಿ

7

ಪ್ರೊ ಕಬಡ್ಡಿ: ಯು ಮುಂಬಾ ಜಯಭೇರಿ

Published:
Updated:

ಗ್ರೇಟರ್ ನೊಯ್ಡಾ: ಅಭಿಷೇಕ್ ಸಿಂಗ್ ಮತ್ತು ದರ್ಶನ್ ಕಡಿಯಾನ್ ಅವರ ಮಿಂಚಿನ  ಆಟದ ಫಲವಾಗಿ ಯು ಮುಂಬಾ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ  ಶುಕ್ರವಾರ ರಾತ್ರಿ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವು 48–24ರಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಗೆದ್ದಿತು.

ಮುಂಬಾ ಆಟಗಾರ ಅಭಿಷೇಕ್ ಸಿಂಗ್ ಅವರು ರೇಡಿಂಗ್‌ನಲ್ಲಿ 10 ಪಾಯಿಂಟ್ಸ್‌ ಮತ್ತು ಟ್ಯಾಕಲ್‌ನಲ್ಲಿ ಎರಡು ಪಾಯಿಂಟ್ಸ್‌ಗಳ ಕಾಣಿಕೆಯನ್ನು ತಂಡಕ್ಕೆಕೊಟ್ಟರು. ಅವರಿಗೆ  ಉತ್ತಮ ಜೊತೆ ನೀಡಿದ ದರ್ಶನ್ ಎದುರಾಳಿಗಳ ಪಾಳಯಕ್ಕೆ ಸವಾಲೊಡ್ಡಿದರು. ರೇಡಿಂಗ್ ನಲ್ಲಿ ಒಂಬತ್ತು ಮತ್ತು ಒಂದು ಬೋನಸ್ ಪಾಯಿಂಟ್ ಗಳಿಸಿದರು. ಇದರಿಂದ ತಂಡವು ದೊಡ್ಡ ಮುನ್ನಡೆ ಗಳಿಸಲು ಸಾಧ್ಯವಾಯಿತು.  ವಿನೋದ್ ಕುಮಾರ್ ರೇಡ್‌ನಲ್ಲಿ ನಾಲ್ಕು ಮತ್ತು ಟ್ಯಾಕಲ್‌ನಲ್ಲಿ ಮೂರು ಪಾಯಿಂಟ್‌ಗಳ ಕಾಣಿಕೆ ನೀಡಿದರು.

ಆರಂಭದ ಹಂತದಲ್ಲಿ ಉತ್ತಮ ಆಟವಾಡಿದ ಪಿಂಕ್‌ ಪ್ಯಾಂಥರ್ಸ್‌ನ ದೀಪಕ್ ನಿವಾಸ್ ಹೂಡಾ ಅವರು  ಆರು ಪಾಯಿಂಟ್ಸ್‌ ಗಳಿಸಿದರು. ಅನೂಪ್ ಕುಮಾರ್ ಐದು ಮತ್ತು ಆನಂದ್ ಪಾಟೀಲ್ ಮೂರು ಅಂಕಗಳೊಂದಿಗೆ ತಂಡಕ್ಕೆ ಚೇತರಿಕೆ ನೀಡಲು ಪ್ರಯತ್ನಿಸಿದರು. ಆದರೆ ರಕ್ಷಣಾ ವಿಭಾಗದಲ್ಲಿ ಹೆಚ್ಚು ಅಂಕಗಳು ಒಲಿಯಲಿಲ್ಲ. ಇದರಿಂದಾಗಿ  ತಂಡವು ಸೋತಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !