ಬುಧವಾರ, ಜೂನ್ 3, 2020
27 °C

ಎಸಿಬಿ ಬಲೆಗೆ ಕಂದಾಯ ಇಲಾಖೆ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ಖಾತೆ ಉತಾರ ಬದಲಾವಣೆಗೆ ರೈತರೊಬ್ಬರಿಂದ ₹ 8 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಕಂದಾಯ ಇಲಾಖೆ ಸಿಬ್ಬಂದಿ ಕೆ. ಕಲಾ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಡಿವೈಎಸ್ಪಿ ಎಂ.ವಿ.ಮಲ್ಲಾಪುರ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ ಹಣ ವಶಪಡಿಸಿಕೊಂಡಿದೆ.

ತಾಲ್ಲೂಕಿನ ತಳಕವಾಡ ಗ್ರಾಮದ ರೈತ ಶಿವಪ್ಪ ಚಿಕ್ಕಕೊಪ್ಪದ ಅವರ ಖಾತೆಯ ಉತಾರೆ ಬದಲಾವಣೆಗೆ ಕಲಾ ಅವರು ₹ 10 ಸಾವಿರ ಲಂಚ ಬೇಡಿದ್ದರು ಎನ್ನಲಾಗಿದೆ. ರೈತ ಶಿವಪ್ಪ ದೂರು ನೀಡಿದ್ದ ಹಿನ್ನೆಲೆಯಲ್ಲಿ ಎಸಿಬಿ ತಂಡ ಬಲೆ ಬೀಸಿದೆ ಎಂದು ತಿಳಿದಿದೆ.

ಸಿಪಿಐ ರಾಘವೇಂದ್ರ ಹಳ್ಳೂರ, ಚಂದ್ರಶೇಖರ್ ಮಠಪತಿ ಮತ್ತು ಸಿಬ್ಬಂದಿ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ  ಕಲಾ ಅವರು ಮೂರ್ಛೆ ಹೋದರು. ಕೂಡಲೇ ಅವರನ್ನು ತುರ್ತಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ‘ಚಿಕಿತ್ಸೆಯಿಂದ ಕಲಾ ಚೇತರಿಸಿಕೊಂಡಿದ್ದಾರೆ. ಅವರ ಜೀವಕ್ಕೆ ತೊಂದರೆ ಇಲ್ಲ’ ಎಂದು ವೈದ್ಯರು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು