ಬಾಡಿಗೆ ನೆಪದಲ್ಲಿ ಕ್ಯಾಮೆರಾ ಸುಲಿಗೆ

7

ಬಾಡಿಗೆ ನೆಪದಲ್ಲಿ ಕ್ಯಾಮೆರಾ ಸುಲಿಗೆ

Published:
Updated:

ಮಂಗಳೂರು: ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯುವ ನೆಪದಲ್ಲಿ ಕುಂಜತ್ತಬೈಲ್‌ನ ವ್ಯಕ್ತಿಯೊಬ್ಬರನ್ನು ಕರೆಸಿಕೊಂಡ ದುಷ್ಕರ್ಮಿಗಳು ಒಂದು ಕ್ಯಾಮೆರಾವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಪಚ್ಚನಾಡಿ ಬೋಂದೇಲ್‌ ಚರ್ಚ್‌ ಬಳಿ ಶುಕ್ರವಾರ ನಡೆದಿದೆ.

ಕುಂಜತ್ತಬೈಲ್‌ ನಿವಾಸಿ ನಾಗೇಶ್‌ ತನ್ನ ಕ್ಯಾಮೆರಾವನ್ನು ದಿನದ ಲೆಕ್ಕದಲ್ಲಿ ಬಾಡಿಗೆಗೆ ನೀಡುತ್ತಿದ್ದರು. ಅವರ ಸ್ನೇಹಿತ ಸುರತ್ಕಲ್‌ ನಿವಾಸಿ ಮಹಮ್ಮದ್ ಸಿನಾನ್‌ ಕೂಡ ಕ್ಯಾಮೆರಾ ಬಾಡಿಗೆಗೆ ನೀಡುತ್ತಿದ್ದರು. ಶುಕ್ರವಾರ ಸಿನಾನ್‌ಗೆ ಕರೆಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಎರಡು ಕ್ಯಾಮೆರಾಗಳನ್ನು ಬಾಡಿಗೆಗೆ ನೀಡುವಂತೆ ಕೇಳಿದ್ದ.

ಕ್ಯಾಮೆರಾ ಬಾಡಿಗೆಗೆ ಬೇಡಿಕೆ ಇರುವ ಕುರಿತು ಸಿನಾನ್‌ ನಾಗೇಶ್‌ಗೆ ಮಾಹಿತಿ ನೀಡಿದ್ದರು. ತನ್ನ ಕ್ಯಾಮೆರಾವನ್ನೂ ತೆಗೆದುಕೊಂಡು ಹೋಗಿ ನೀಡುವಂತೆ ಹೇಳಿದ್ದರು. ಅದರಂತೆ ಗೆಳೆಯನ ಹಾಗೂ ತನ್ನ ಕ್ಯಾಮೆರಾಗಳನ್ನು ತೆಗೆದುಕೊಂಡು ಕರೆಮಾಡಿದ್ದ ವ್ಯಕ್ತಿಯನ್ನು ಭೇಟಿಮಾಡಲು ಶುಕ್ರವಾರ ರಾತ್ರಿ 9.15ರ ಸುಮಾರಿಗೆ ಪಚ್ಚನಾಡಿಗೆ ಹೋಗಿದ್ದರು.

ನೋಂದಣಿ ಸಂಖ್ಯೆ ಇಲ್ಲದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ನಾಗೇಶ್ ಅವರನ್ನು ಭೇಟಿ ಮಾಡಿದ್ದರು. ಕ್ಯಾಮೆರಾ ಪಡೆಯುವ ಮುನ್ನ ಆಧಾರ್‌ ಚೀಟಿ ನೀಡುವಂತೆ ಅವರು ಸೂಚಿಸಿದ್ದರು. ಮಾತುಕತೆ ನಡುವೆಯೇ ನಿಕಾನ್‌ 3400 ಕ್ಯಾಮೆರಾ ಇದ್ದ ಚೀಲವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !