ಕೆಆರ್‌ಎಸ್‌ ಉಳಿವಿಗೆ ಜನಾಂದೋಲನ ಡಿ.17ರಂದು ಚಾಲನೆ

7

ಕೆಆರ್‌ಎಸ್‌ ಉಳಿವಿಗೆ ಜನಾಂದೋಲನ ಡಿ.17ರಂದು ಚಾಲನೆ

Published:
Updated:

ಮಂಡ್ಯ: ‘ಅಕ್ರಮ ಕಲ್ಲು ಗಣಿಗಾರಿಕೆಯಿಂದ ಐತಿಹಾಸಿಕ ಕೆಆರ್‌ಎಸ್‌ ಜಲಾಶಯ ಸಂರಕ್ಷಿಸಿಸಲು ಹಮ್ಮಿಕೊಂಡಿರುವ ಜನಾಂದೋಲನಕ್ಕೆ ಡಿ.17ರಂದು ಚಾಲನೆ ನೀಡಲಾಗುವುದು’ ಎಂದು ಕೆಆರ್‌ಎಸ್‌ ಉಳಿವಿಗಾಗಿ ಜನಾಂದೋಲನ ಸಮಿತಿ ಮಂಡ್ಯ–ಮೈಸೂರು ವಿಭಾಗದ ಸದಸ್ಯ ಪ.ಮಲ್ಲೇಶ್‌ ಮಂಗಳವಾರ ಇಲ್ಲಿ ಹೇಳಿದರು.

‘ಕೆಆರ್‌ಎಸ್‌ನಲ್ಲಿ ಅಂದು ಬೆಳಿಗ್ಗೆ 11ಗಂಟೆಗೆ ಬೃಹತ್‌ ಸಭೆ ನಡೆಸುವ ಮೂಲಕ ಜನಾಂದೋಲನಕ್ಕೆ ಚಾಲನೆ ನೀಡಲಾಗುವುದು. ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು. ಕಲ್ಲು ಗಣಿಗಾರಿಕೆಯಿಂದ ಜನಜೀವನದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಅಂತರ್ಜಲ ಪಾತಾಳಕ್ಕೆ ಇಳಿದಿದೆ, ಕೃಷಿ ಭೂಮಿ ಹಾಳಾಗಿದೆ, ಪ್ರಾಕೃತಿಕ ಸಂಪನ್ಮೂಲ ಲೂಟಿಮಾಡಲಾಗುತ್ತಿದೆ. ಇದರ ವಿರುದ್ಧ ಜನಾಂದೋಲನ ಅನಿವಾರ್ಯವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್ ಪೇಟೆ ಮತ್ತು ಕೆ.ಆರ್.ನಗರ ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆಯುಂಟಾಗಿದೆ. ಗಣಿಗಾರಿಕೆಯಿಂದ ಗುಜರಾತ್‌ನ ಮೋರ್ವಿ ದುರಂತ, ಕೊಡಗು ಜಿಲ್ಲೆಯ ಸಂಭವಿಸಿದ ನೆರೆ ಹಾವಳಿಯಂತಹ ಘಟನೆಗಳು ನಮ್ಮ ಜಿಲ್ಲೆಯಲ್ಲೂ ಸಂಭವಿಸಬಹುದು. ಈ ನಿಟ್ಟಿನಿಲ್ಲಿ ಗಣಿಗಾರಿಕೆಗೆ ಶಾಶ್ವತವಾಗಿ ನಿಷೇಧ ಹೇರಬೇಕಾಗಿದೆ. ರಾಜಕೀಯ ಪ್ರಭಾವಿಗಳು ನಡೆಸುತ್ತಿರುವ ಗಣಿ ಚಟುವಟಿಕೆಗೆ ಕಡಿವಾಣ ಹಾಕಬೇಕಾಗಿದೆ’ ಎಂದು ಒತ್ತಾಯಿಸಿದರು.

ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಬೃಂದಾವನ ಉದ್ಯಾನ ಅಭಿವೃದ್ಧಿಗೊಳಿಸುವ ವಿಚಾರವನ್ನು ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಕೈಗೊಂಡಿದೆ. ಅಣೆಕಟ್ಟೆಯ ಹಿತದೃಷ್ಟಿಯಿಂದ ಅಲ್ಲಿ ಬೃಹತ್‌ ಕಾಮಗಾರಿ ನಡೆಸುವುದನ್ನು ತಡೆಯಬೇಕು. ನಮ್ಮ ಹೋರಾಟಕ್ಕೆ ನೂರಾರು ಸಂಘಟನೆಗಳು ಕೈಜೋಡಿಸಿವೆ’ ಎಂದು ಹೇಳಿದರು.

ಇತಿಹಾಸ ತಜ್ಞ ನಂಜರಾಜೇ ಅರಸ್‌ ಮಾತನಾಡಿ ‘2019ರ ಲೋಕಸಭೆ ಚುನಾವಣೆಗೆ ಸಂಪನ್ಮೂಲ ಕ್ರೋಢೀಕರಿಸುವ ಉದ್ದೇಶದಿಂದ ಡಿಸ್ನಿಲ್ಯಾಂಡ್‌ ಯೋಜನೆ ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಸಹಭಾಗಿತ್ವದ ಹಿನ್ನೆಲೆಯಲ್ಲಿ ವಿದೇಶಗಳಿಂದ ಹರಿದು ಬರುವ ಬಹುಕೋಟಿ ಹಣವನ್ನು ಲೂಟಿ ಹೊಡೆಯುವ ಉದ್ದೇಶ  ಯೋಜನೆಯ ಹಿಂದೆ ಇದೆ. ಇದೇ ಯೋಜನೆಯನ್ನು ಬೇರೆ ಕಡೆ ಜಾರಿಗೊಳಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿ. ಕೆಆರ್‌ಎಸ್‌ ಜಲಾಶಯದ ಬಳಿಯೇ ಡಿಸ್ನಿಲ್ಯಾಂಡ್‌ ಮಾಡುವ ಅವಶ್ಯಕತೆಯಾದರೂ ಏನು’ ಎಂದು ಪ್ರಶ್ನಿಸಿದರು.

ರೈತ ಮುಖಂಡ ಬಡಗಲಪುರ ನಾಗೇಂದ್ರ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಪ್ರೊ.ಜಿ.ಟಿ.ವೀರಪ್ಪ, ಸುನಂದಾ ಜಯರಾಂ, ಸಿ.ಕುಮಾರಿ, ಶಂ`ಭೂನಹಳ್ಳಿ ಸುರೇಶ್, ಹುಲ್ಕೆರೆ ಮಹದೇವು, ಎ.ಎಲ್.ಕೆಂಪುಗೌಡ, ಕೆ.ಗೋಪಾಲಕೃಷ್ಣ, ಚಂದ್ರಶೇಖರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !