ದೊಡ್ಡನಾಗಮಂಗಲ: ಅಕ್ರಮ ಮನೆಗಳ ತೆರವು

7
ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್‌ ನೇತೃತ್ವದಲ್ಲಿ ಕಾರ್ಯಾಚರಣೆ

ದೊಡ್ಡನಾಗಮಂಗಲ: ಅಕ್ರಮ ಮನೆಗಳ ತೆರವು

Published:
Updated:
Deccan Herald

ಬೆಂಗಳೂರು: ದಕ್ಷಿಣ ತಾಲ್ಲೂಕಿನ ದೊಡ್ಡನಾಗಮಂಗಲದಲ್ಲಿ ಅನಧಿಕೃತವಾಗಿ ಕಟ್ಟಲಾದ ಮನೆಗಳನ್ನು ನಗರ ಜಿಲ್ಲಾಧಿಕಾರಿ .ಎಂ.ವಿಜಯ
ಶಂಕರ್‌ ನೇತೃತ್ವದಲ್ಲಿ ಗುರುವಾರ ತೆರವುಗೊಳಿಸಲಾಯಿತು. 

‘ದೊಡ್ಡನಾಗಮಂಗಲದ ಸರ್ವೇ ನಂ 6ರ ಜಮೀನಿನಲ್ಲಿ 75 ಮನೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಎಲ್ಲವನ್ನೂ ತೆರವುಗೊಳಿಸಲಾಗಿದೆ. ಸುಮಾರು ₹50 ಕೋಟಿ ಮೌಲ್ಯದ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ' ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಪ‌ವಿಭಾಗಾಧಿಕಾರಿ ಡಾ.ಹರೀಶ್‌ ನಾಯ್ಕ್‌ ಮತ್ತು ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿ
ಭಾಗವಹಿಸಿದ್ದರು. ಬನ್ನೇರುಘಟ್ಟ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಆಯಾ ಸ್ಥಳಕ್ಕೆ ಭೇಟಿ ನೀಡಿ
ಪರಿಶೀಲಿಸಿದ್ದೇನೆ.

ಇಲ್ಲಿನ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು 8 ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ಆ ತಂಡ ವರದಿ ನೀಡಲಿದೆ ಎಂದು ವಿಜಯಶಂಕರ್‌ ಅವರು ಮಾಹಿತಿ ನೀಡಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !