ಜಿಲ್ಲೆಯಲ್ಲಿ ಕೃಷಿ ಪರಿಕರ ಅಂಗಡಿಗಳ ಬಂದ್

7

ಜಿಲ್ಲೆಯಲ್ಲಿ ಕೃಷಿ ಪರಿಕರ ಅಂಗಡಿಗಳ ಬಂದ್

Published:
Updated:
Deccan Herald

ಬೀದರ್: ಸರ್ಕಾರದಿಂದ ರಿಯಾಯಿತಿ ದರದಲ್ಲಿ ಕೊಡಲಾಗುವ ಕೃಷಿ ಪರಿಕರಗಳನ್ನು ಪರವಾನಗಿ ಹೊಂದಿದ ಕೃಷಿ ಪರಿಕರ ವ್ಯಾಪಾರಿಗಳ ಮೂಲಕವೇ ವಿತರಿಸುವಂತೆ ಆಗ್ರಹಿಸಿ ಕೃಷಿ ಪರಿಕರ ಅಂಗಡಿಗಳ ಮಾಲೀಕರು ಜಿಲ್ಲೆಯಲ್ಲಿ ಗುರುವಾರ ತಮ್ಮ ಅಂಗಡಿಗಳನ್ನು ಬಂದ್ ಮಾಡಲಿದ್ದಾರೆ. 

ಕರ್ನಾಟಕ ಆಗ್ರೊ ಟ್ರೇಡರ್ಸ್ ಅಸೋಸಿಯೇಶನ್ ನೀಡಿರುವ ರಾಜ್ಯದಾದ್ಯಂತ ಕೃಷಿ ಪರಿಕರ ಅಂಗಡಿಗಳ ಬಂದ್ ಕರೆಯ ಮೇರೆಗೆ ಜಿಲ್ಲೆಯಲ್ಲೂ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಬೀದರ್‌ ಆಗ್ರೊ ಇನ್‌ಪುಟ್‌ ಡೀಲರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ ತಿಳಿಸಿದ್ದಾರೆ.

ಕೃಷಿ ಪರಿಕರ ಮಾರಾಟ ವ್ಯಾಪಾರಿಗಳ ಬಹು ದಿನಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ವೇಳೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಇಲ್ಲಿನ ಸುವರ್ಣಸೌಧದ ಎದುರು ಧರಣಿ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ನೀಡಲಾಗುವ ಕೃಷಿ ಪರಿಕರಗಳನ್ನು ಪರವಾನಗಿ ಹೊಂದಿರುವ ಕೃಷಿ ಪರಿಕರ ಮಾರಾಟ ವ್ಯಾಪಾರಿಗಳ ಮೂಲಕವೇ ವಿತರಿಸಬೇಕು ಹಾಗೂ ಪರವಾನಗಿ ಪತ್ರದಲ್ಲಿನ ಗೊಂದಲ ನಿವಾರಿಸಬೇಕು ಎನ್ನುವುದು ವ್ಯಾಪಾರಿಗಳ ಬೇಡಿಕೆಗಳಾಗಿವೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಹೋರಾಟವನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !