ಒಂದೇ ದಿನ ₹ 12.5 ಕೋಟಿ ತೆರಿಗೆ ಸಂಗ್ರಹ

7

ಒಂದೇ ದಿನ ₹ 12.5 ಕೋಟಿ ತೆರಿಗೆ ಸಂಗ್ರಹ

Published:
Updated:

ಬೆಂಗಳೂರು: ಪಾಲಿಕೆಗೆ ಡಿ.31ರಂದು ಒಂದೇ ದಿನ ₹12.5 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಒಟ್ಟಾರೆ ಈ ವರ್ಷ ಏಪ್ರಿಲ್‌ನಿಂದ ಇಲ್ಲಿಯವರೆಗೆ ನಗರದ 16.63 ಲಕ್ಷ ಆಸ್ತಿಗಳ ಮಾಲೀಕರು ಒಟ್ಟು ₹2,220 ಕೋಟಿ ತೆರಿಗೆ ಮೊತ್ತ ಪಾವತಿಸಿದ್ದಾರೆ.

ಆರ್ಥಿಕ ವರ್ಷ ಮುಗಿಯಲು ಇನ್ನೂ ಮೂರು ತಿಂಗಳು ಬಾಕಿ ಇದೆ. ಅದರೊಳಗೇ ದಾಖಲೆಯ ಪ್ರಮಾಣದ ತೆರಿಗೆ ಸಂಗ್ರಹವಾಗಿರುವುದು ಅಧಿಕಾರಿಗಳಲ್ಲಿ ನಿರಾಳತೆ ಮೂಡಿಸಿದೆ. ಇನ್ನೂ 7 ಲಕ್ಷದಷ್ಟು ಆಸ್ತಿಗಳಿಂದ ತೆರಿಗೆ ಪಾವತಿ ಆಗಬೇಕಿದೆ.

ಹೇಗೆ ಸಾಧ್ಯ?: ‘2016ರ ಅಂತ್ಯದಲ್ಲಿ ಅನುಷ್ಠಾನಗೊಳಿಸಿದ ಭೌಗೋಳಿಕ ಮಾಹಿತಿ ವ್ಯವಸ್ಥೆಯಿಂದ (ಜಿಐಎಸ್‌) ಎಲ್ಲ ತೆರಿಗೆ ಬಾಕಿದಾರರನ್ನು ಪತ್ತೆ ಹಚ್ಚುವುದು ಸುಲಭವಾಗಿಬಿಟ್ಟಿದೆ. ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಸಂಪೂರ್ಣ ಮಾಹಿತಿ ದೊರೆ
ಯುತ್ತದೆ. ವಿಳಾಸ, ದೂರವಾಣಿ ಸಂಖ್ಯೆ ಎಲ್ಲವೂ ಕಂಪ್ಯೂಟರ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಬಾಕಿದಾರರಿಗೆ ಅಧಿಕಾರಿಗಳು ನೋಟಿಸ್‌ ಕೊಡಲೂ ಅನುಕೂಲವಾಗಿದೆ’ ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ವಿವರಿಸಿದರು.

‘ಇನ್ನೂ ಆರ್ಥಿಕ ವರ್ಷ ಮುಗಿದಿಲ್ಲ. ಮೂರು ತಿಂಗಳು ಬಾಕಿ ಇದೆ. ಈ ಅವಧಿಯಲ್ಲಿ ಇನ್ನೂ ₹ 500 ಕೋಟಿಯಷ್ಟು ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.  2017–18ನೇ ಆರ್ಥಿಕ ವರ್ಷದಲ್ಲಿ ₹ 2,130 ಕೋಟಿ ತೆರಿಗೆ ಸಂಗ್ರಹವಾಗಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !