ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

7

ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

Published:
Updated:

ಬೆಂಗಳೂರು: ಪೀಣ್ಯ, ಯಲಹಂಕ ಹಾಗೂ ವೈಟ್‌ಫೀಲ್ಡ್ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಮಂಗಳವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಅಸುನೀಗಿದ್ದಾರೆ.

ದಾಸರಹಳ್ಳಿ ಸಮೀಪದ ಚೊಕ್ಕಸಂದ್ರ ಜಂಕ್ಷನ್‌ನಲ್ಲಿ ರಾತ್ರಿ 1.15ರ ಸುಮಾರಿಗೆ ಬೈಕ್‌ಗೆ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಕಿರಣ್ (26) ಮೃತಪಟ್ಟಿದ್ದರೆ, ಹಿಂಬದಿ ಸವಾರ ಸಲೀಂ ಗಾಯಗೊಂಡಿದ್ದಾರೆ.

ದಾಸರಹಳ್ಳಿ ನಿವಾಸಿಯಾದ ಕಿರಣ್, ಜಾಲಹಳ್ಳಿ ಕ್ರಾಸ್‌ನಲ್ಲಿ ಕಚೇರಿ ಹೊಂದಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಟೆಂಪೊ ಟ್ರಾವೆಲರ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೀಣ್ಯ ಸಂಚಾರ ಪೊಲೀಸರು ತಿಳಿಸಿದರು.

ವಾಯುವಿಹಾರದ ವೇಳೆ: ಯಲಹಂಕದ ಸಿಆರ್‌ಪಿಎಫ್ ವಸತಿ ಸಮುಚ್ಚಯದ ಬಳಿ ಸಂಜೆ 6.30ರ ಸುಮಾರಿಗೆ ಕಾರು ಗುದ್ದಿ ಶಿವಮಾದಯ್ಯ (68) ಎಂಬುವರು ಮೃತಪಟ್ಟು, ಅವರ ಬೀಗರು ದೊಡ್ಡಸಿದ್ದಯ್ಯ (63) ಗಾಯಗೊಂಡಿದ್ದಾರೆ.

ಕನಕಪುರದ ಶಿವಮಾದಯ್ಯ, ಮಗಳನ್ನು ಸಿಆರ್‌ಪಿಎಫ್‌ ನೌಕರನಿಗೆ ಕೊಟ್ಟು ಮದುವೆ ಮಾಡಿದ್ದರು. ದಂಪತಿ ವಸತಿ ಸಮುಚ್ಚಯದಲ್ಲಿ ನೆಲೆಸಿದ್ದರು. ಮಂಗಳವಾರ ಎರಡೂ ಕುಟುಂಬಗಳು ಅವರ ಮನೆಯಲ್ಲಿ ಸೇರಿದ್ದರು. ಶಿವಮಾದಯ್ಯ ಹಾಗೂ ದೊಡ್ಡಸಿದ್ದಯ್ಯ ಸಂಜೆ ವಾಯುವಿಹಾರ ಮಾಡುತ್ತಿದ್ದಾಗ ಇಬ್ಬರಿಗೂ ಕಾರು ಗುದ್ದಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಶಿವಮಾದಯ್ಯ ಸ್ಥಳದಲ್ಲೇ ಕೊನೆಯುಸಿರೆಳೆದರು.

ನೇಪಾಳದ ವ್ಯಕ್ತಿ ಸಾವು: ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ನೇಪಾಳದ ಮಹೇಶ್ ಕಬಾಡಿಯಾ (24) ಎಂಬುವರು ಮೃತಪಟ್ಟಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅವರು, ಕೆಲಸ ಮುಗಿಸಿಕೊಂಡು ನಸುಕಿನಲ್ಲಿ (2.30ರ ಸುಮಾರಿಗೆ) ಮನೆಗೆ ಮರಳುವಾಗ ಈ ದುರಂತ ಸಂಭವಿಸಿದೆ. ಬಸ್ ಚಾಲಕ ವೆಂಕಟೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !