ಆರು ವರ್ಷಗಳ ಬಳಿಕ ಆರೋಪಿ ವಶಕ್ಕೆ

7
ಮಹಿಳೆಯ ಹತ್ಯೆಗೈದು ಚಿನ್ನಾಭರಣ ದೋಚಿದ್ದ ಗ್ಯಾಂಗ್

ಆರು ವರ್ಷಗಳ ಬಳಿಕ ಆರೋಪಿ ವಶಕ್ಕೆ

Published:
Updated:

ಬೆಂಗಳೂರು: ಮಹಿಳೆಯ ಮನೆಗೆ ನುಗ್ಗಿ ಅವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಗ್ಯಾಂಗ್‌ನ ಸದಸ್ಯನನ್ನು ನಗರದ ಕೆಂಪೇಗೌಡ ಠಾಣೆ ಪೊಲೀಸರು, ಕೃತ್ಯ ನಡೆದು ಆರು ವರ್ಷಗಳ ಬಳಿಕ ವಶಕ್ಕೆ ಪಡೆದಿದ್ದಾರೆ.

ಕೆಂಪೇಗೌಡ ನಗರದ ನಿವಾಸಿಯಾಗಿದ್ದ ಮಾನಸ ಎಂಬುವರನ್ನು 2013ರಲ್ಲಿ ಕೊಲೆ ಮಾಡಲಾಗಿತ್ತು. ಅವರ ಮನೆಯಲ್ಲಿದ್ದ 400 ಗ್ರಾಂ ಚಿನ್ನಾಭರಣ ಹಾಗೂ ₹1 ಲಕ್ಷ ನಗದು ದೋಚಲಾಗಿತ್ತು.

‘ಮಾನಸ, ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಅದೇ ವೇಳೆ ಮನೆಯೊಳಗೆ ನುಗ್ಗಿದ್ದ ಆರೋಪಿಗಳು, ಚಾಕು ತೋರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದರು. ಅದಕ್ಕೆ ಪ್ರತಿರೋಧ ತೋರಿದ್ದರಿಂದಾಗಿ ಮಾನಸ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೃತ್ಯದ ಬಗ್ಗೆ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅದೇ ಕಾರಣಕ್ಕೆ ತನಿಖೆಯನ್ನು ತಟಸ್ಥವಾಗಿಡಲಾಗಿತ್ತು. ಇತ್ತೀಚೆಗೆ ದರೋಡೆ ಪ್ರಕರಣವೊಂದರ ಆರೋಪಿಗಳ ವಿಚಾರಣೆ ವೇಳೆ ಮಾನಸ ಕೊಲೆಯ ಸುಳಿವು ಸಿಕ್ಕಿತು. ಅದನ್ನು ಆಧರಿಸಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’.

‘ಕೃತ್ಯದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ ಸದಸ್ಯರೆಲ್ಲರನ್ನೂ ವಶಕ್ಕೆ ಪಡೆಯಬೇಕಿದೆ. ಹೀಗಾಗಿಯೇ, ಸದ್ಯ ವಶಕ್ಕೆ ಪಡೆದಿರುವ ಆರೋಪಿಯ ಹೆಸರು ಬಹಿರಂಗಪಡಿಸಲಾಗದು’ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !