ಭಾರತ ಪುಣ್ಯಭೂಮಿ: ರಾಜಶೇಖರಾನಂದ ಸ್ವಾಮೀಜಿ

7
ಗುರುಪುರ ವಜ್ರದೇಹಿ ಮಠದಲ್ಲಿ ವಾರ್ಷಿಕ ಜಾತ್ರೆ

ಭಾರತ ಪುಣ್ಯಭೂಮಿ: ರಾಜಶೇಖರಾನಂದ ಸ್ವಾಮೀಜಿ

Published:
Updated:
Prajavani

ಬಜ್ಪೆ: ‘ಭಾರತ ಒಂದು ಪುಣ್ಯಭೂಮಿ. ಇದು ವೇದ, ಉಪನಿಷತ್ತು, ಭಾಗವತ ಹೊಂದಿರುವ ಶ್ರೇಷ್ಠ ರಾಷ್ಟ್ರ’ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಗುರುಪುರ ವಜ್ರದೇಹಿ ಮಠದ ವಾರ್ಷಿಕ ಜಾತ್ರೆ ಪ್ರಯುಕ್ತ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತೀಯರಲ್ಲಿ ದೇಶಭಕ್ತಿಯ ಕೊರತೆ ಎದ್ದು ಕಾಣುತ್ತಿದೆ. ನಮ್ಮ ಉನ್ನತಿಯಾಗಬೇಕಿದ್ದರೆ ನಮ್ಮ ಪರಿಚಯ ನಮಗಾಗಬೇಕು. ವ್ಯಕ್ತಿಯೊಬ್ಬ ತನ್ನ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡಾಗ ಆತ ದೇಶಕ್ಕೆ ಆಸ್ತಿಯಾಗುತ್ತಾನೆ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಂಬೈ ಹೋಟೆಲ್ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ, ನನ್ನ ದೃಷ್ಟಿಯಲ್ಲಿ ಧರ್ಮ ಕ್ಷೇತ್ರದಲ್ಲಿ ಸಿಗುವ ಸನ್ಮಾನ ಜೀವನಶ್ರೇಷ್ಠವಾಗಿರುತ್ತದೆ ಎಂದರು.

ಮೂಡುಶೆಡ್ಡೆ ಮಂಜುನಾಥ ಭಂಡಾರಿ, ವಿಶ್ವಹಿಂದೂ ಪರಿಷತ್‌ ಮುಖಂಡ ಎಂ. ಬಿ. ಪುರಾಣಿಕ್, ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ. ಆರ್, ಕಂಡೇಶ್, ಭಾಸ್ಕರ ವೈ. ಶೆಟ್ಟಿ ಮಾತನಾಡಿದರು. ವಿರಾರ್ ಶಂಕರ ಶೆಟ್ಟಿ(ಸಂಘಟನೆ), ಸುಬ್ರಹ್ಮಣ್ಯ ದಂಪತಿ(ಪಾಕಶಾಸ್ತ್ರ), ಕಿಶೋರ್ ವಾಮಂಜೂರು(ರಂಗ ಕಲಾವಿದ) ಇವರಿಗೆ ಹನುಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ್ಷೇತ್ರದ ಅರ್ಚಕ ಅರುಣ್ ಭಟ್ ಖಂಡಿಗೆ ಪ್ರಾರ್ಥಿಸಿದರು. ಹರೀಶ್ ಶೆಟ್ಟಿ ಸ್ವಾಗತಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ರಿಥಮಿಕ್ ಯೋಗ ನೃತ್ಯಪಟು  ಶಿಫಾಲಿ ವಿ ಕುಳವೂರು ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !