‘ವಿಜಯಾ ಬ್ಯಾಂಕ್ ವಿಲೀನ; ಕನ್ನಡಿಗರಿಗೆ ಅನ್ಯಾಯ’

7

‘ವಿಜಯಾ ಬ್ಯಾಂಕ್ ವಿಲೀನ; ಕನ್ನಡಿಗರಿಗೆ ಅನ್ಯಾಯ’

Published:
Updated:

ಬಾಗಲಕೋಟೆ: ‘ವಿಜಯಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಿರುವ ಕೇಂದ್ರ ಸರ್ಕಾರ, ಎರಡೂ ಬ್ಯಾಂಕ್‌ಗಳಲ್ಲಿ ಪಾವತಿಯಾಗದ ಸಾಲದ (ಎನ್‌ಪಿಎ) ಪ್ರಮಾಣ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು.

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘₹3 ಸಾವಿರ ಕೋಟಿ ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಜೊತೆ ₹200 ಕೋಟಿ ಲಾಭದಲ್ಲಿರುವ ವಿಜಯಾಬ್ಯಾಂಕನ್ನು ವಿಲೀನಗೊಳಿಸಲಾಗಿದೆ. ಹೀಗೆ ಕೂಡಿಕೊಂಡ ಬ್ಯಾಂಕ್‌ಗೆ ನಷ್ಟದಲ್ಲಿರುವ ಬ್ಯಾಂಕ್ ಬರೋಡಾ ಹೆಸರನ್ನೇ ಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರೇಮವನ್ನು ಮೆರೆದಿದ್ದಾರೆ. ಆ ಮೂಲಕ ವಿಜಯಾ ಬ್ಯಾಂಕ್ ಸ್ಥಾಪಿಸಿದ್ದ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಬ್ಯಾಂಕ್ ವಂಚನೆ ಪ್ರಕರಣಗಳು ಅತಿ ಹೆಚ್ಚು ಬ್ಯಾಂಕ್ ಆಫ್ ಬರೋಡಾದಲ್ಲಿಯೇ ನಡೆದಿವೆ. ಹಾಗಿದ್ದರೂ ವಿಜಯಾ ಬ್ಯಾಂಕನ್ನು ಅದರಲ್ಲಿ ವಿಲೀನಗೊಳಿಸಿದ್ದರ ಔಚಿತ್ಯವೇನು’ ಎಂದು ಪ್ರಶ್ನಿಸಿದ ಖಾದರ್, ‘ಎರಡೂ ಬ್ಯಾಂಕ್‌ಗಳಿಗೆ ವಂಚಿಸಿದವರ ಪಟ್ಟಿ ಬಹಿರಂಗಪಡಿಸಲಿ’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !