‘ಸಾಮಾಜಿಕ ಕಾರ್ಯಕ್ರಮಗಳಿಗೆ ಒತ್ತು’

7
ಜೆಸಿಐ ರಾಯಚೂರು 26ನೇ ಘಟಕದ ಪದಗ್ರಹಣ ಸಮಾರಂಭ

‘ಸಾಮಾಜಿಕ ಕಾರ್ಯಕ್ರಮಗಳಿಗೆ ಒತ್ತು’

Published:
Updated:
Prajavani

ರಾಯಚೂರು: ಸಸಿ ನೆಡುವ ಕಾರ್ಯಕ್ರಮ, ನೀರು ಸಂಗ್ರಹಣ ಪದ್ದತಿ, ಮತದಾನದ ಹಕ್ಕು , ಗ್ರಾಹಕರ ಜವಾಬ್ದಾರಿ, ಸಂಚಾರಿ ನಿಯಮಗಳ ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ವೈದ್ಯಕಿಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಜೆಸಿಐ ನೂತನ ಅಧ್ಯಕ್ಷ ವಿಜಯ ಮಹಾಂತೇಶ ಹೇಳಿದರು.

ನಗರದ ಗೀತಾ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜೆಸಿಐ ರಾಯಚೂರು 26ನೇ ಘಟಕದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶಪ್ರೇಮ, ಧಾರ್ಮಿಕತೆ, ಸಂಸ್ಕೃತಿ ಮತ್ತು ಪರಂಪರೆಯ ಪೋಷಣೆ, ಸಧೃಡ ಯುವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜೆಸಿಐ ಹೆಸರು ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಎಸ್.ಕಮಲಕುಮಾರ್ ಮಾತನಾಡಿ, ಸಂಸ್ಥೆಯ ಸದಸ್ಯರ ಕರ್ತವ್ಯ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.

ನೂತನ ಕಾರ್ಯದರ್ಶಿ ನಿತೇಶ, ಖಜಾಂಚಿ ಶಶಿಧರ ಬುದ್ದಿನಿ, ಉಪಾದ್ಯಕ್ಷರಾದ ನವಿನ, ಶಶಿಕಾಂತ ಬೂಬ್, ಪಿಯೂಷ್ ಆಂಚಲಿಯಾ, ಬಂಗಾರರಾಜು, ಯೋಗೆಶ ಬಂಗ್, ಜಂಟಿ ಕಾರ್ಯದರ್ಶಿ ವಿಶಾಲ ಹಂಚಾಟೆ, ನಿರ್ದೇಶಕರಾಗಿ ವಿಜಯ ಸಕ್ರಿ, ಅಮರೇಶ, ರಿಕಬ್ ಚಂದ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಪದಗ್ರಹಣ ಮಾಡಿದರು.

ವಿಜಯ ಮಹಾಂತೇಶರ ತಾಯಿ ಸರ್ಕಾರಿ ಶಿಕ್ಷಕಿಯಾಗಿ ಸಲ್ಲಿಸಿದ ಸೇವೆ ಗುರುತಿಸಿ ಶರಣಮ್ಮ ಮಠದ ಅವರನ್ನು ಸನ್ಮಾನಿಸಲಾಯಿತು.

ಜೆಸಿಐ ಜೋನ್ 12ರ ಅಧ್ಯಕ್ಷ ಸಾಯಿಕಿರಣ ಬಂಟು, ಕಂದಾಯ ಮತ್ತು ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕಾಶಿ ಶಂಕರ, ಶಶಿಧರ್ ಹೂಗಾರ್, ಹೇಮಣ್ಣ ಉನ್ನಿ, ರಾಕೆಶ ರಾಜಲಬಂಡಿ, ಶಿಲಾ ಮಂಜುನಾಥ, ರೋಟರಿ ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಶಿವನಗೌಡ ಪಾಟೀಲ್, ಶಾಂತಕುಮಾರ ಪುಲ್ಸೆ, ಪೂರ್ಣಿಮಾ ಇಂಟರ್ ನ್ಯಾಷನಲ್ ಶಾಲಾ ಅಧ್ಯಕ್ಷೆ ರೇಖಾ ಕೇಶವರೆಡ್ಡಿ, ಸಂಸ್ಥಾಪಕ ಅಧ್ಯಕ್ಷ ಗೌತಮ ಜೈನ, ಪಿ.ಬಸವರಾಜ, ಗೊಂವಿದರಾಜು, ದೀಲಿಪಕುಮಾರ ಬೊಹರಾ, ಸಿದ್ದನಗೌಡ, ದೀಪಕ ಸಂಚೇತಿ, ಆಶೋಕ ಲೋಧಾ, ಮಧು, ರಾಜೇಂದ್ರ ಬೊಹರಾ, ರಮಾಕಾಂತ, ಸುಧಾಕರ ಪ್ರಭು, ದೇವನಪಲ್ಲಿ ಶ್ರೀನಿವಾಸ, ವಿಕಾಸ ರುನವಾಲ್ ಇದ್ದರು. ವಾಹಿನಿ ನೃತ್ಯವನ್ನು ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !