ಉಲ್ಟಾ ಹೊಡೆದ ಶಾಮನೂರು: ಜಯಮೃತ್ಯುಂಜಯ ಶ್ರೀ ಅಚ್ಚರಿ

7

ಉಲ್ಟಾ ಹೊಡೆದ ಶಾಮನೂರು: ಜಯಮೃತ್ಯುಂಜಯ ಶ್ರೀ ಅಚ್ಚರಿ

Published:
Updated:

ಬಾಗಲಕೋಟೆ: ‘ಜೊತೆಗೆ ಸೇರಿದ್ದ ವೇಳೆ ನಾವು–ನೀವು ಒಂದೇ, ಹೋರಾಟ ಮುಂದುವರೆಸಿ ಎಂದು ಹೇಳುವ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಈಗ ಉಲ್ಟಾ ಹೊಡೆಯುತ್ತಿದ್ದಾರೆ’ ಎಂದು ಲಿಂಗಾಯತ ಪಂಚಮಸಾಲಿಪೀಠದ ಜಯಮೃತ್ಯುಜಯ ಸ್ವಾಮೀಜಿ ಅಚ್ಚರಿ ವ್ಯಕ್ತಪಡಿಸಿದರು.

ಕೂಡಲಸಂಗಮ ಬಸವಧರ್ಮಪೀಠದಲ್ಲಿ ಭಾನುವಾರ ನಡೆದ ಶರಣಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಂಚದ ಹಣದಲ್ಲಿ ಸ್ವತಂತ್ರ ಧರ್ಮದ  ಹೋರಾಟ ನಡೆಸಲಾಯಿತು ಎಂದು ಶಾಮನೂರು ಶಿವಶಂಕರಪ್ಪ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿ ಮೇಲಿನಂತೆ ಹೇಳಿದರು.

'ಶಿವಶಂಕರಪ್ಪ ನನಗೆ ಆತ್ಮೀಯರು. ಇತ್ತೀಚೆಗೆ ದಾವಣಗೆರೆಯಲ್ಲಿ ನಾವೆಲ್ಲಾ ಭೇಟಿಯಾಗಿದ್ದ ವೇಳೆ ಅವರೇ ಒಂದು ಮಾತು ಹೇಳಿದ್ದರು. ಬುದ್ಧಿ ಬೇರೆ ಬೇರೆ ಪಂಗಡದವರಾದರೂ ನಾವೆಲ್ಲರೂ ಲಿಂಗಾಯತರೇ, ಬಸವಣ್ಣನ ತತ್ವದವರು. ವೀರಶೈವ ಮಹಾಸಭಾದ ಅಧ್ಯಕ್ಷನಾಗಿರುವ ಕಾರಣಕ್ಕೆ ಅನಿವಾರ್ಯವಾಗಿ ಎರಡೂ ಒಂದೇ ಎಂದು ನಾನು ಹೇಳುತ್ತಿದ್ದೇನೆ. ನಾನೂ ಲಿಂಗಾಯತನೇ, ನಿಮ್ಮ ಹೋರಾಟ ನೀವು ಮುಂದುವರೆಸಿ. ನಿಮ್ಮ ದಾರಿ ಸರಿ ಇದೆ’ ಎಂದು ಹೇಳಿದ್ದರು. ಈಗ ಉಲ್ಟಾ ಹೊಡೆದಿರುವುದು ಅಚ್ಚರಿ ಮೂಡಿಸಿದೆ’ ಎಂದರು.

’ಲಿಂಗಾಯತರ ಹೋರಾಟ ಪವಿತ್ರ ಹೋರಾಟ. ಇಡೀ ಜಗತ್ತು ಈ ಹೋರಾಟದ ಬಗ್ಗೆ ಕುತೂಹಲದಿಂದ ನೋಡುತ್ತಿದೆ. ನಮ್ಮ ದಾರಿ ಜಾಗತಿಕ ಮಟ್ಟದ್ದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !