ವಿಶಾಖಪಟ್ಟಣ: ಬೌಲರ್ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಭಾರತ ತಂಡವು, ಮಹಿಳೆಯರ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾನುವಾರ ಎಂಟು ವಿಕೆಟ್ಗಳಿಂದ ಸುಲಭವಾಗಿ ಸೋಲಿಸಿತು. 44 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದ ಜೆಮಿಮಾ ರಾಡ್ರಿಗಸ್ ಬ್ಯಾಟಿಂಗ್ನಲ್ಲಿ ತಂಡವನ್ನು ಬೇಗನೇ ಗುರಿತಲುಪಿಸಲು ನೆರವಾದರು.

ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವೇಗ– ಸ್ಪಿನ್ ದಾಳಿಯ ಮುಂದೆ ಪರದಾಡಿದ ಲಂಕನ್ನರು 6 ವಿಕೆಟ್ಗೆ 121 ರನ್ಗಳ ಸಾಧಾರಣ ಮೊತ್ತ ಗಳಿಸಿದರು. ಭಾರತ ತಂಡವು ಇನ್ನೂ 5.2 ಓವರುಗಳು ಬಾಕಿಯಿರುವಂತೆ 2 ವಿಕೆಟ್ಗೆ 122 ರನ್ ಗಳಿಸಿತು. ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ದಾಖಲಿಸಿತು.

ಆರಂಭ ಆಟಗಾರ್ತಿ ಶಫಾಲಿ ವರ್ಮಾ (9) ಅವರನ್ನು ತಂಡ ಬೇಗನೇ ಕಳೆದುಕೊಂಡಿತು. ಆದರೆ ಸ್ಮೃತಿ ಮಂದಾನ (25, 25ಎ) ಜೊತೆಗೂಡಿದ ಜೆಮಿಮಾ ಎರಡನೇ ವಿಕೆಟ್ಗೆ 54 ರನ್ ಸೇರಿಸಿದರಲ್ಲದೇ, ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಮುರಿಯದ ಮೂರನೇ ವಿಕೆಟ್ಗೆ ನಾಯಕಿ ಹರ್ಮನ್ಪ್ರೀತ್ ಕೌರ್ (ಔಟಾಗದೇ15) ಅವರೊಂದಿಗೆ 55 ರನ್ ಸೇರಿಸಿದರು. ಜೆಮಿಮಾ ಅವರ ಅಜೇಯ ಆಟದಲ್ಲಿ ಹತ್ತು ಬೌಂಡರಿಗಳಿದ್ದವು.

ಇದಕ್ಕೆ ಮೊದಲು ಭಾರತದ ಬೌಲರ್ಗಳು ಸಂಘಟಿತ ದಾಳಿ ನಡೆಸಿ ಶ್ರೀಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ್ದರು. ಆರಂಭ ಆಟಗಾರ್ತಿ ವಿಶ್ಮಿ ಗುಣರತ್ನ 39 (43 ಎಸೆತ) ಪ್ರಮುಖ ಕೊಡುಗೆ ನೀಡಿದರು.

ಲಂಕಾ ತಂಡದ ನಾಯಕಿ ಚಾಮರಿ ಅಟಪಟ್ಟು (15) ಅವರು ಮೂರನೇ ಓವರಿನಲ್ಲಿ ನಿರ್ಗಮಿಸಿದರು. ಅತಿಥೇಯ ಬೌಲರ್ಗಳ ಬಿಗು ದಾಳಿಯೆದುರು ಲಂಕಾ ತಂಡದ ರನ್ವೇಗ ಯಾವ ಹಂತದಲ್ಲೂ ಗಮನಾರ್ಹವಾಗಿ ಹೆಚ್ಚಲಿಲ್ಲ. ವೇಗದ ಬೌಲರ್ಗಳಾದ ಕ್ರಾಂತಿ ಗೌಡ, ಅರುಂಧತಿ ರೆಡ್ಡಿ, ಸ್ಪಿನ್ನರ್ಗಳಾದ ದೀಪ್ತಿ ಶರ್ಮಾ, ವೈಷ್ಣವಿ ಶರ್ಮಾ, ಶ್ರೀಚರಣಿ ಕಡಿವಾಣ ಹಾಕಿದರು.

ಮಧ್ಯಪ್ರದೇಶದ 20 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ (16/0) ಅವರಿಗೆ ಇದು ಪದಾರ್ಪಣೆ ಪಂದ್ಯವಾಗಿತ್ತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರುಗಳಲ್ಲಿ 6 ವಿಕೆಟ್ಗೆ 121 (ವಿಶ್ಮಿ ಗುಣರತ್ನೆ 39, ಹಸಿನಿ ಪೆರೇರಾ 20, ಹರ್ಷಿತಾ ಸಮರವಿಕ್ರಮ 21; ಕ್ರಾಂತಿ ಗೌಡ್ 23ಕ್ಕೆ1, ದೀಪ್ತಿ ಶರ್ಮಾ 20ಕ್ಕೆ1); ಭಾರತ: 14.4 ಓವರುಗಳಲ್ಲಿ 2 ವಿಕೆಟ್ಗೆ 122 (ಸ್ಮೃತಿ ಮಂದಾನ 25, ಜೆಮಿಮಾ ರಾಡ್ರಿಗಸ್ ಹರ್ಮನ್ಪ್ರೀತ್ ಕೌರ್ ಔಟಾಗದೇ 15; ಕಾವ್ಯಾ ಕವಿಂದಿ 20ಕ್ಕೆ1, ಇನೋಕಾ ರಣವೀರ 17ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.