ವೇತನ ಬಡವರಿಗೆ ಹಂಚಿದ ಫಾರೂಕ್‌

ಶನಿವಾರ, ಮಾರ್ಚ್ 23, 2019
28 °C

ವೇತನ ಬಡವರಿಗೆ ಹಂಚಿದ ಫಾರೂಕ್‌

Published:
Updated:
Prajavani

ಮಂಗಳೂರು: ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌ ಅವರು ಶಾಸಕರ ವೇತನ ಮತ್ತು ಭತ್ಯೆಯ ರೂಪದಲ್ಲಿ ತಮಗೆ ದೊರಕಿದ್ದ ₹ 5 ಲಕ್ಷವನ್ನು ಭಾನುವಾರ ಬಡ ರೋಗಿಗಳಿಗೆ ಚಿಕಿತ್ಸೆಗಾಗಿ ವಿತರಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಫಾರೂಕ್‌ ಅವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಬಡ ರೋಗಿಗಳಿಗೆ ನೆರವಿನ ಚೆಕ್‌ಗಳನ್ನು ವಿತರಿಸಿದರು. ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಒಟ್ಟು 46 ಜನರಿಗೆ ನೆರವು ನೀಡಲಾಯಿತು.

ಫಾರೂಕ್‌ ಅವರು ತಮ್ಮ ವೇತನ ಮತ್ತು ಭತ್ಯೆಯ ಪೂರ್ಣ ಮೊತ್ತವನ್ನು ಸಾರ್ವಜನಿಕರಿಗೆ ನೆರವು ನೀಡಲು ವಿನಿಯೋಗಿಸುತ್ತಿದ್ದಾರೆ. ಅಕ್ಟೋಬರ್‌ನಿಂದ ಈವರೆಗೆ ಒಟ್ಟು 125 ಜನರಿಗೆ ₹ 11.05 ಲಕ್ಷ ಮೊತ್ತದ ನೆರವು ವಿತರಿಸಲಾಗಿದೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

ಕ್ಯಾನ್ಸರ್‌, ಹೃದ್ರೋಗ ಮತ್ತು ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆದ್ಯತೆ ಮೇಲೆ ನೆರವು ನೀಡಲಾಗುತ್ತಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಕ್ಷಣಕ್ಕೆ ನೆರವು ಒದಗಿಸಲು ಸಾಧ್ಯವಾಗದ ಪ್ರಕರಣಗಳಲ್ಲಿ ಮತ್ತು ಅಗತ್ಯ ಇರುವಷ್ಟು ಮೊತ್ತದ ನೆರವು ದೊರೆಯದ ಪ್ರಕರಣಗಳಲ್ಲಿ ಫಾರೂಕ್‌ ಅವರು ತಮ್ಮ ವೇತನವನ್ನು ಹಂಚುತ್ತಿದ್ದಾರೆ.

‘ಫಾರೂಕ್‌ ಅವರ ಈ ನಡೆ ಶ್ಲಾಘನೀಯ. ಇಷ್ಟೇ ಅಲ್ಲ, ಅವರ ಸ್ವಂತ ದುಡಿಮೆಯಲ್ಲಿ ಸುಮಾರು ₹ 40 ಲಕ್ಷದಷ್ಟು ಹಣವನ್ನೂ ಅವರು ಇತ್ತೀಚೆಗೆ ಈ ರೀತಿಯ ಕೆಲಸಗಳಿಗೆ ವಿನಿಯೋಗಿಸಿದ್ದಾರೆ’ ಎಂದು ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !