ಅತ್ಯಾಚಾರಕ್ಕೆ ಯತ್ನ:ಆರೋಪಿಯ ಬಂಧನ

ಶನಿವಾರ, ಮಾರ್ಚ್ 23, 2019
34 °C
ಪೋಕ್ಸೊ ಪ್ರಕರಣದಡಿ ಕ್ರಮ

ಅತ್ಯಾಚಾರಕ್ಕೆ ಯತ್ನ:ಆರೋಪಿಯ ಬಂಧನ

Published:
Updated:
Prajavani

ಮಂಗಳೂರು: ಮನೆಯ ಜಾಗದ ತಕರಾರು ಇತ್ಯರ್ಥಪಡಿಸಲು ಸಹಾಯ ಮಾಡುವುದಾಗಿ ವಿದ್ಯಾರ್ಥಿನಿಯೊಬ್ಬರನ್ನು ನಂಬಿಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬೆಳ್ತಂಗಡಿ ತಾಲ್ಲೂಕಿನ‌ ತೆಂಕ ಕಾರಂದೂರು ಗ್ರಾಮದ ಕಾಪಿನಡ್ಕ ನಿವಾಸಿ ಅಶೋಕ್‌ ಆಚಾರ್ಯ (31) ಎಂಬಾತನನ್ನು ಬೆಳ್ತಂಗಡಿ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಸಂತ್ರಸ್ತೆಯು ಪಿಯುಸಿ ವಿದ್ಯಾರ್ಥಿನಿ. ಅವರ ತಂದೆಯ ಹೆಸರಿನಲ್ಲಿರುವ ಜಾಗಕ್ಕೆ ಸಂಬಂಧಿಸಿದಂತೆ ತಕರಾರು ಇತ್ತು. ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿಸಿಕೊಡುತ್ತಿದ್ದ ಅಶೋಕ್‌ ಆಚಾರ್ಯ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ಜಾಗದ ವಿಚಾರದಲ್ಲಿ ನೆರವು ನೀಡುವುದಾಗಿ ಆಕೆಯನ್ನು ನಂಬಿಸಿ, ಗೆಳೆತನ ಸಾಧಿಸಿದ್ದ ಎಂದು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಬಾಬು ತಿಳಿಸಿದ್ದಾರೆ.

‘ರಜೆಯ ಸಮಯದಲ್ಲಿ ತನ್ನ ಕಚೇರಿಗೆ ಬಂದು ಓದಿಕೊಳ್ಳುವಂತೆ ಸಂತ್ರಸ್ತೆಗೆ ಆರೋಪಿ ಹೇಳಿದ್ದ. ಅದರಂತೆ 2018ರ ಜುಲೈ 9ರಂದು ಓದಲು ಹೋಗಿದ್ದಾಗ ಅತ್ಯಾಚಾರಕ್ಕೆ ಯತ್ನಿಸಿದ್ದ. ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿ ಮತ್ತೆ ಕಚೇರಿಗೆ ಹೋಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಸಂತ್ರಸ್ತೆಯ ತೇಜೋವಧೆ ಮಾಡುವುದಾಗಿ ಬೆದರಿಸಿದ್ದ. 2019ರ ಜನವರಿ 21ರಂದು ವಿದ್ಯಾರ್ಥಿನಿಯು ಕಾಲೇಜಿಗೆ ಹೋಗಲು ಬಸ್ಸು ಹತ್ತುತ್ತಿದ್ದಾಗ ಆಟೊದಲ್ಲಿ ಬಂದು ಕರೆದೊಯ್ದಿದ್ದ. ಪುನಃ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಕುರಿತು ಭಾನುವಾರ ವಿದ್ಯಾರ್ಥಿನಿ ದೂರು ನೀಡಿದ್ದಳು’ ಎಂದು ಮಾಹಿತಿ ನೀಡಿದ್ದಾರೆ.

ಅಶೋಕ್‌ ಆಚಾರ್ಯನ ವಿರುದ್ಧ ಪೋಕ್ಸೊ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !