ಖರ್ಗೆಗೆ ಮತ ಹಾಕದಿರಲು ಮಿಲ್ಲಿ ಕೌನ್ಸಿಲ್‌ ಸಭೆ ನಿರ್ಣಯ

ಸೋಮವಾರ, ಮಾರ್ಚ್ 18, 2019
31 °C

ಖರ್ಗೆಗೆ ಮತ ಹಾಕದಿರಲು ಮಿಲ್ಲಿ ಕೌನ್ಸಿಲ್‌ ಸಭೆ ನಿರ್ಣಯ

Published:
Updated:

ಕಲಬುರ್ಗಿ: ‘ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಬಾರಿ ಯಾವುದೇ ಕಾರಣಕ್ಕೂ ಮುಸ್ಲಿಮರು ಮತ ಹಾಕಬಾರದು’ ಎಂಬ ಒಮ್ಮತದ ನಿರ್ಣಯವನ್ನು ನಗರದಲ್ಲಿ ಬುಧವಾರ ನಡೆದ, ಅಖಿಲ ಭಾರತ ಮಿಲ್ಲಿ ಕೌನ್ಸಿಲ್‌ ಜಿಲ್ಲಾ ಘಟಕದ ಸಭೆಯಲ್ಲಿ ಕೈಗೊಳ್ಳಲಾಗಿದೆ.

‘ಖರ್ಗೆ ಅವರು ಮುಸ್ಲಿಮರನ್ನು ತೀವ್ರ ಕಡೆಗಣಿಸಿದ್ದಾರೆ. ಹೇಗೋ ಮುಸ್ಲಿಮರು ಕಾಂಗ್ರೆಸ್ಸಿಗೇ ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿಯೇ ಇಷ್ಟು ವರ್ಷ ರಾಜಕೀಯ ಮಾಡಿದ್ದಾರೆ. ಆದರೆ, ಈ ಬಾರಿ ವಿವೇಚನೆ ಬಳಸಿ ಮತ ಹಾಕಬೇಕು’ ಎಂದೂ ಕೆಲ ಮುಖಂಡರು ನಿರ್ಣಯ ಮಂಡಿಸಿದರು. ಇದಕ್ಕೆ ಉಳಿದವರು ಧ್ವನಿಮತ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರೀಂ ಉಲ್‌ ಹುಸೇನ್‌, ‘ಮಾಜಿ ಸಚಿವ ಖಮರುಲ್‌ ಇಸ್ಲಾಂ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಆ ಸೇಡು ತೀರಿಸಿಕೊಳ್ಳಲು ಅವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸಿ. ಬೇಕಿದ್ದರೆ ನಾವು ಡಾ.ಉಮೇಶ ಜಾಧವಗೆ ಮತ ಹಾಕಿದರೂ ಪರವಾಗಿಲ್ಲ. ನಮ್ಮ ನಾಯಕನಿಗೆ ತೊಂದರೆ ಕೊಟ್ಟವರನ್ನು ಸೋಲಿಸಲು ಒಗ್ಗಾಟ್ಟಾಗಿ’ ಎಂದು ಕರೆ ನೀಡಿದರು.

‘ಸ್ವತಃ ಖಮರುಲ್‌ ಇಸ್ಲಾಂ ಅವರೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್‌ ಅವರ ರಾಜಕೀಯ ಕೊನೆಗೊಳಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು. ಈಗ ಅವರ ಅಲ್ಲಾಹ್‌ನೊಂದಿಗೆ ಇದ್ದಾರೆ. ಅವರ ಮೇಲೆ ಅಭಿಮಾನವಿದ್ದರೆ ಆ ಕೆಲಸವನ್ನು ನಾವು ಮಾಡಲೇಬೇಕಿದೆ’ ಎಂದರು. ಈ ಮಾತಿಗೆ ಉಳಿದ ಮುಖಂಡರೆಲ್ಲ ‘ಖಂಡಿತಾ’ ಎಂದು ಬೆಂಬಲ ಸೂಚಿಸಿದರು.

ಸಭೆಯಲ್ಲಿ ಮುಖಂಡರು ಹೊರಚೆಲ್ಲಿದ ಆಕ್ರೋಶದ ವಿಡಿಯೊ ತುಣುಕುಗಳು ಕೂಡ ಗುರುವಾರ ಜಿಲ್ಲೆಯಲ್ಲಿ ವೈರಲ್‌ ಆದವು.

ಬಿಜೆಪಿಗೆ ಹೋಗಲ್ಲ: ಲಖನ್‌
ಗೋಕಾಕ:
‘ಕಾಂಗ್ರೆಸ್‌ ಬಿಡುವುದಿಲ್ಲ. ಬಿಜೆಪಿ ಸೇರುವುದೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯೂ ನನಗಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಲಖನ್‌ ಜಾರಕಿಹೊಳಿ 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !