ರಾಹು–ಕೇತು ಯಾರು ಸ್ಪಷ್ಟಪಡಿಸಿ: ಸಿದ್ದರಾಮಯ್ಯಗೆ ಕೆ.ಎಸ್.ಈಶ್ವರಪ್ಪ ಸವಾಲು

ಶುಕ್ರವಾರ, ಏಪ್ರಿಲ್ 19, 2019
27 °C

ರಾಹು–ಕೇತು ಯಾರು ಸ್ಪಷ್ಟಪಡಿಸಿ: ಸಿದ್ದರಾಮಯ್ಯಗೆ ಕೆ.ಎಸ್.ಈಶ್ವರಪ್ಪ ಸವಾಲು

Published:
Updated:

ಬಾಗಲಕೋಟೆ: ‘ತಮ್ಮನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳಿಂದ ಸೋಲಿಸಿದ್ದು ಎಚ್.ಡಿ.ದೇವೇಗೌಡರೋ ಇಲ್ಲವೇ ಜಿ.ಟಿ.ದೇವೇಗೌಡರೊ ಎಂಬುದನ್ನು ಸಿದ್ದರಾಮಯ್ಯ ಮೊದಲು ಹೇಳಲಿ. ತಮ್ಮ ಪಾಲಿನ ರಾಹು ಯಾರು, ಕೇತು ಯಾರು, ಶನಿ ಯಾರು ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ ಎಂದು ಜೆಡಿಎಸ್‌ನ ಇಬ್ಬರು ಮಂತ್ರಿಗಳು ನೇರವಾಗಿ ಹೇಳಿದ್ದಾರೆ. ಇದು ಅಲ್ಲಿನ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ. ಬಿಜೆಪಿಗೆ ಲಾಭವಾಗಲಿದೆ’ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !